ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೇಯರ್ ಗೌನ್ ಗದ್ದಲ, ಕಾಂಗ್ರೆಸ್ ಪ್ರತಿಭಟನೆ : ಸಾಮಾನ್ಯ ಸಭೆ ಹಟಾತ್ ಮುಂದೂಡಿಕೆ

ಹುಬ್ಬಳ್ಳಿ: ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯುತ್ತಿತ್ತು. ಆದ್ರೆ ಸಭೆ ಆರಂಭದಲ್ಲೇ ಮೇಯರ್ ಗೌನ್ ಗದ್ದಲ ಸೃಷ್ಟಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯ ಮಧ್ಯೆ ಜಟಾಪಟಿ ನಡೆದ Exclusive ವಿಡಿಯೋ ಇಲ್ಲಿದೆ...

ಹೌದು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಿದ್ದರು. ಆದರೆ ಮೇಯರ್ ಈರೇಶ ಅಂಚಟಗೇರಿ ಅವರು ರಾಷ್ಟ್ರಪತಿ ಅವರಿಗೆ ತಮ್ಮ ಗೌನ್ ಇಲ್ಲದೆ ಪೌರ ಸನ್ಮಾನ ಮಾಡಿದ್ದಾರೆಂದು ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಕಿಡಿಕಾರಿದರು.

ಗೌನ್ ಧರಿಸದ ಶಿಷ್ಟಾಚಾರಕ್ಕೆ ತಿಲಾಂಜಲಿ ಹಾಡಿರುವ ಮೇಯರ್ ಈರೇಶ ಅಂಚಟಗೇರಿ, ಸಭೆಗೆ ಆಗಮಿಸುತ್ತಿದ್ದಂತೆಯೇ ಮೇಯರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಹರಿಹಾಯ್ದರು. ಅಷ್ಟೇ ಅಲ್ಲದೆ ಇಂದಿನ ಸಾಮಾನ್ಯ ಸಭೆಗೂ ಕೂಡ ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸದೆ ಬಂದಿದ್ದರು. ಸಭೆಯಲ್ಲಿಯೇ ಪ್ರತಿಭಟನೆಗೆ ಮುಂದಾದ ಕೈ ಸದಸ್ಯರು, ಸಭಾಂಗಣದಲ್ಲಿಯೇ ಧರಣಿಗೆ ಕುಳಿತಿದ್ದಾರೆ.

ಗೌನ್ ಧರಿಸಿಯೇ ಸಭೆ ನಡೆಸಬೇಕೆಂದು ಪಟ್ಟು ಹಿಡಿದು ಕುಳಿತ ಸದಸ್ಯರು. ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸುವುದನ್ನ ಕೈಬಿಟ್ಟು ಅಗೌರವ ತೋರುತ್ತಿದ್ದಾರೆ. ಮೇಯರ್ ಏಕಪಕ್ಷೀಯ ನಿರ್ಧಾರ ತಗೆದುಕೊಳ್ಳುವ ಮೂಲಕ ಅಗೌರವ ತೋರುತ್ತಿದ್ದಾರೆ. ಗೌನ್ ಧರಿಸಬೇಕು ಇಲ್ಲವೇ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಮೇಯರ್ ವಿರುದ್ಧ ಘೋಷಣೆ ಕೂಗಿ ಸಭೆಯಲ್ಲಿಯೇ ಪ್ರತಿಭಟನೆಗಿಳಿದರು. ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಅರ್ಧ ಗಂಟೆ ಸಭೆಯನ್ನು ಮುಂದೂಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/09/2022 02:52 pm

Cinque Terre

50.16 K

Cinque Terre

4

ಸಂಬಂಧಿತ ಸುದ್ದಿ