ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 1.5 ಕೋಟಿ ಲೆಕ್ಕ ಕೊಡಿ, ಇಲ್ಲದಿದ್ರೆ ರಾಜೀನಾಮೆ ನೀಡಿ: ಮೇಯರ್ ವಿರುದ್ಧ ಅವ್ಯವಹಾರದ ಆರೋಪ

ಹುಬ್ಬಳ್ಳಿ: ಪೇ ಸಿಎಂ ಅಭಿಯಾನ ವ್ಯಾಪಕ ಚರ್ಚೆಗೆ ಒಳಪಟ್ಟ ಬೆನ್ನಲ್ಲೇ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರು ಈಗ ಪೇ ಮೇಯರ್ ಎನ್ನುವ ಅಭಿಯಾನವನ್ನು ಶುರುಮಾಡಿದ್ದಾರೆ. ಹೌದು ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಅವ್ಯವಹಾರ ನಡೆದಿರುವ ಶಂಕೆಯಲ್ಲಿ ಕಾಂಗ್ರೆಸ್ ಪೇ ಮೇಯರ್ ಅಭಿಯಾನ ಹಮ್ಮಿಕೊಂಡಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ

ದೇಶದಲ್ಲೇ ಮೊದಲ ಬಾರಿಗೆ ಎನ್ನುವಂತೆ ಹುಬ್ಬಳ್ಳಿಯಲ್ಲಿ ಕಳೆದ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರ ಸನ್ಮಾನ ಮಾಡಿ ದೇಶದ ಮೊದಲ ಪ್ರಜೆಗೆ ಗೌರವ ನೀಡಿತ್ತು. ಇದೆ ವಿಚಾರವಾಗಿ ಈಗ ವಿವಾದವೊಂದು ಭುಗಿಲೆದ್ದಿದ್ದು, ಪಾಲಿಕೆ ಗದ್ದುಗೆ ಹಿಡಿದಿರುವ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗುತ್ತಿದೆ.

ರಾಷ್ಟ್ರಪತಿಗಳ 45 ನಿಮಿಷದ ಕಾರ್ಯಕ್ರಮಕ್ಕೆ ಅವಳಿನಗರ ಪಾಲಿಕೆ ಬರೋಬ್ಬರಿ 1.5 ಕೋಟಿ ಖರ್ಚು ಮಾಡಿರುವುದಾಗಿ ಈಗಾಗಲೇ ಹೇಳಿಕೊಂಡಿದೆ. ಇದರ ಬೆನ್ನಲೇ ಹಲವು ಸಂಶಯಾಸ್ಪದ ವ್ಯವಹಾರಗಳನ್ನ ಕೂಡ ತರಾತುರಿಯಲ್ಲಿ ನಡೆಸಿಬಿಟ್ಟಿದೆ. ಇದೇ ಹಿನ್ನೆಲೆಯಲ್ಲಿ ಮೇಯರ್ ಕಾರ್ಯಕ್ರಮದ ಖರ್ಚು ವೆಚ್ಚದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಪೇ ಮೇಯರ್ ಪೋಸ್ಟರ್ ಅಂಟಿಸಿ ಲೆಕ್ಕ ಕೇಳಿದ್ದಾರೆ.

ಮೇಯರ್ ಈರೇಶ ಅಂಚಟಗೇರಿ ಅವರೇ ನಿಮ್ಮ ಲಂಚಾವತಾರವನ್ನು ಸಾರುವ #PayMayor ಪೋಸ್ಟರ್ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ. ದುಂದು ವೆಚ್ಚ ಮಾಡಿ ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ ಇಲ್ಲವೇ ರಾಜೀನಾಮೆ ನೀಡಿ ಎಂಬ ಟ್ವೀಟ್ ವೈರಲ್ ಆಗುತ್ತಿದ್ದು ಇದಕ್ಕೆ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ಕೂಡ ನೀಡುತ್ತಿಲ್ಲ

ಸದ್ಯ ಹುಬ್ಬಳ್ಳಿ ಧಾರವಾಡ ನಗರಕ್ಕೂ ಪೇ ಮೇಯರ್ ಅಭಿಯಾನ ಶುರುವಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಈ ಅಭಿಯಾನಕ್ಕೆ ತಾರ್ಕಿಕ ಅಂತ್ಯ ಹೇಗೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ

ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/09/2022 03:32 pm

Cinque Terre

45.24 K

Cinque Terre

7

ಸಂಬಂಧಿತ ಸುದ್ದಿ