ಹುಬ್ಬಳ್ಳಿ: ಹಿಂದೂ ಯುವಕ-ಯುವತಿಯರನ್ನು ಮುಸ್ಲಿಂ ಸಮುದಾಯಕ್ಕೆ ಬಲವಂತಾಗಿ ಮತಾಂತರ ಮಾಡುತ್ತಿರುವುದನ್ನು ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರವು ವಿಧಾನ ಪರಿಷತ್ ಮತ್ತು ವಿಧಾನಸಭೆಗಳಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯು ಜಾರಿಯಾಗಿದ್ದರೂ ಕೂಡ ಇಂತಹ ಮತಾಂತರ ಘಟನೆಗಳು ಸಮಾಜದಲ್ಲಿ ನಡೆಯುತ್ತಿದ್ದು, ಖಂಡನೀಯ. ಮತಾಂಧ ಮೌಲಾನಾಗಳ ಹಿಂದೆ ಯಾರ ಕುಮ್ಮಕ್ಕೂ, ಯಾವ ಯಾವ ಸಂಘಟನೆಗಳು ಕೆಲಸ ಮಾಡುತ್ತಿದ್ದಾರೆ ಎಂದು ನಿಷ್ಪಕ್ಷಪಾತವಾಗಿ ಪತ್ತೆ ಹಚ್ಚಿ ಅಂತಹ ಸಮಾಜಘಾತುಕರನ್ನು ಕಾನೂನಿನ ಅಡಿಯಲ್ಲಿ ಕಟ್ಟು ನಿಟ್ಟಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿರುವ ಸಂಘಟನೆಗಳನ್ನು ಕಿತ್ತೊಗೆಯಬೇಕು. ದಲಿತ ಯುವತಿಯರನ್ನು ಮುಸ್ಲಿಂ ಸಂಘಟನೆಗಳು ಟಾರ್ಗೆಟ್ ಮಾಡಿ ದೌರ್ಜನ್ಯ ಮಾಡುತ್ತಿದೆ. ದೇಶದ್ರೋಹಿ ಮುಸ್ಲಿಂ ಸಂಘಟನೆಗಳಿಗೆ ಧಿಕ್ಕಾರ, ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
28/09/2022 02:12 pm