ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಶ್ವಕರ್ಮ ಜಯಂತಿಯಲ್ಲಿ ಡೊಳ್ಳು ಬಾರಿಸಿದ ಜೋಶಿ

ಧಾರವಾಡ: ಧಾರವಾಡದಲ್ಲಿ ಇಂದು ಬ್ರಹ್ಮಶ್ರೀ ವಿಶ್ವಕರ್ಮ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಧಾರವಾಡದ ಮೌನೇಶ್ವರ ದೇವಸ್ಥಾನದಿಂದ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸ್ವತಃ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸ್ವತಃ ತಾವೇ ಡೊಳ್ಳು ಹಾಕಿಕೊಂಡು ಅದನ್ನು ಬಾರಿಸುವ ಮೂಲಕ ಡೊಳ್ಳಿನ ಮೇಳದವರನ್ನು ಹುರುದುಂಬಿಸಿದರು.

ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಮೇಯರ್ ಈರೇಶ ಅಂಚಟಗೇರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಅನೇಕರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

17/09/2022 03:05 pm

Cinque Terre

15.73 K

Cinque Terre

0

ಸಂಬಂಧಿತ ಸುದ್ದಿ