ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಮೇಶ ಕತ್ತಿ ನಿಧನಕ್ಕೆ ಮಾಜಿ ಶಾಸಕ ಕೋನರೆಡ್ಡಿ ಸಂತಾಪ

ಹುಬ್ಬಳ್ಳಿ: ಸಚಿವ ಉಮೇಶ ಕತ್ತಿ ನಿಧನಕ್ಕೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಪ್ರತಿಯೊಬ್ಬ ಜನಪ್ರತಿನಿಧಿಗಳಿಗೂ ಉಮೇಶ ಕತ್ತಿ ಅವರು ಅಂದರೆ ನಿಜಕ್ಕೂ ಅಷ್ಟೊಂದು ಪ್ರೇಮ. ಅವರ ಸೌಜನ್ಯತೆ, ಸಾರ್ವಜನಿಕರ ಜೊತೆಗೆ ಒಡನಾಟ ಎಲ್ಲವೂ ಅಚ್ಚುಮೆಚ್ಚಿನದಾಗಿತ್ತು. ಇಂತಹ ಮಹಾನ ವ್ಯಕ್ತಿ ಹಾಗೂ ಹಿರಿಯ ರಾಜಕಾರಣಿಯನ್ನ ಕಳೆದುಕೊಂಡಿರುವುದು ನಿಜಕ್ಕೂ ದುಃಖವನ್ನುಂಟು ಮಾಡುತ್ತಿದೆ ಎಂದರು.

ಸಚಿವ ಉಮೇಶ ಕತ್ತಿಯವರ ಕುಟುಂಬಕ್ಕೆ ದೇವರು ದುಃಖ ಬರಿಸುವ ಶಕ್ತಿಯನ್ನು ನೀಡಲಿ. ಅಲ್ಲದೇ ಈ ಸಾವಿನ ಸಂಗತಿ ನಿಜಕ್ಕೂ ಎಲ್ಲರ ಮನಸ್ಸಿನಲ್ಲಿಯೂ ನೋವನ್ನುಂಟು ಮಾಡಿದೆ ಎಂದು ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

Edited By :
Kshetra Samachara

Kshetra Samachara

07/09/2022 08:25 pm

Cinque Terre

22.48 K

Cinque Terre

0

ಸಂಬಂಧಿತ ಸುದ್ದಿ