ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಚಿವ ಉಮೇಶ ಕತ್ತಿ ನಿಧನಕ್ಕೆ ಶಾಸಕ ಅಮೃತ ದೇಸಾಯಿ ತೀವ್ರ ಸಂತಾಪ

ಧಾರವಾಡ: ಹೃದಯಾಘಾತದಿಂದ ನಿಧನರಾದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಖಾತೆ ಸಚಿವರಾದ ಉಮೇಶ ಕತ್ತಿಯವರ ನಿಧನಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನೇರ ಮತ್ತು ನಿಷ್ಠುರ ನಾಯಕರಾಗಿದ್ದ ಉಮೇಶ ಕತ್ತಿಯವರು, ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಕತ್ತಿಯವರ ಅಗಲಿಕೆ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ, ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾದಂತಾಗಿದೆ. ಭಗವಂತ ಅವರ ಕುಟುಂಬಕ್ಕೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

07/09/2022 01:31 pm

Cinque Terre

20.6 K

Cinque Terre

2

ಸಂಬಂಧಿತ ಸುದ್ದಿ