ಧಾರವಾಡ: ರಾಜ್ಯದ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸುವ ಮೇಯರ್ ಹಾಗೂ ಉಪಮೇಯರ್‌ಗಳು ಗೌನ್ ಧರಿಸುವ ಪದ್ಧತಿ ಇದೆ. ಅಲ್ಲದೇ ದೇಶದ ಯಾವುದೇ ಗಣ್ಯ ವ್ಯಕ್ತಿಗಳು ಬಂದಾಗ ಗೌನ್ ಹಾಕಿಕೊಂಡೇ ಅವರನ್ನು ಸ್ವಾಗತಿಸಬೇಕಾಗುತ್ತದೆ. ಇದು ಬ್ರಿಟೀಷರು ಮಾಡಿದ ಪದ್ಧತಿಯಾಗಿದ್ದರಿಂದ ರಾಜ್ಯದಾದ್ಯಂತ ಈ ಗೌನ್ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಿವಿಧ ವಿಷಯಗಳಲ್ಲಿ ಹಲವಾರು ಗೊಡ್ಡು ಸಂಪ್ರದಾಯಗಳಿಗೆ ವಿದಾಯ ಹೇಳಿದ್ದು, ನೌಕಾ ಸೇನೆಯಲ್ಲಿ ಬ್ರಿಟೀಷರ ಲಾಂಛನ ತೆಗೆದು ಶಿವಾಜಿ ಮಹಾರಾಜರ ಲಾಂಛನ ಸೇರ್ಪಡೆ ಹಾಗೂ ರಾಷ್ಟ್ರದ ಲಾಂಛನದಲ್ಲಿ ಘರ್ಜಿಸುತ್ತಿರುವ ಸಿಂಹಗಳು ಹೀಗೆ ಹಲವಾರು ಬದಲಾವಣೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಅದೇ ರೀತಿ ಗೌನ ವಿಷಯದಲ್ಲಿ ಇದು ಬ್ರಿಟೀಷರು ಮಾಡುತ್ತಿರುವ ಪರಿಪಾಲನೆ ಹಾಗೂ ಇದರಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕದ ಯಾವುದೇ ಕರುಹಗಳಿಲ್ಲ. ಬ್ರಿಟೀಷರ ಪ್ರತೀಕವಾದ ಗೌನ ಧರಿಸುವ ಸಂಪ್ರದಾಯವನ್ನು ರಾಜ್ಯಾದ್ಯಂತ ರದ್ದುಪಡಿಸಿ ಭಾರತೀಯ ಸಾಂಸ್ಕೃತಿಯ ಮೈಸೂರು ಮಹಾರಾಜರು ಪ್ರತಿಪಾದಿಸಿದ ಪೋಷಾಕನ್ನು ಧರಿಸುವ ನಿಯಮ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಈ ಬದಲಾವಣೆಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Kshetra Samachara
04/09/2022 10:17 pm