ಧಾರವಾಡ: ಬೀಡಿ, ಸಿಗರೇಟ್ ಮಾರಾಟ ಮಾಡುವ ಸಣ್ಣ ಮಾರಾಟಗಾರರಿಗೂ ಸರ್ಕಾರ ಲೈಸೆನ್ಸ್ ನೀಡಲು ಮುಂದಾಗಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಬೀಡಿ, ಸಿಗರೇಟ್ ಮಾರಾಟಗಾರರ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಣ್ಣ ಪುಟ್ಟ ಅಂಗಡಿಗಳಿಗೂ ಲೈಸೆನ್ಸ್ ನೀಡುವ ವಿಚಾರವನ್ನು ಸರ್ಕಾರ ಕೈಬಿಡಬೇಕು. ಬೇರೆ ರಾಜ್ಯದಲ್ಲಿ ಇಲ್ಲದ ಲೈಸೆನ್ಸ್ ಪದ್ಧತಿ ನಮ್ಮ ರಾಜ್ಯದಲ್ಲಿ ಏಕೆ? ಸರ್ಕಾರ ಕೂಡಲೇ ಈ ಲೈಸೆನ್ಸ್ ಪದ್ಧತಿಯನ್ನು ಕೈಬಿಡಬೇಕು ಎಂದು ಸಂಘದ ಸದಸ್ಯರು ಒತ್ತಾಯಿಸಿದರು.
Kshetra Samachara
29/08/2022 12:52 pm