ಧಾರವಾಡ: ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ದಹನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಅಂತಹ ಸಂಸ್ಕೃತಿ ಇಲ್ಲ. ಸಾವರ್ಕರ್ ಅವರ ಫೋಟೋವನ್ನು ನಾವು ದಹಿಸಿಲ್ಲ. ಅದನ್ನು ನಾನು ನೋಡಿಯೂ ಇಲ್ಲ. ನಾವು ಕೇವಲ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಭಾವಚಿತ್ರವನ್ನು ಮಾತ್ರ ದಹನ ಮಾಡಿದ್ದೇವೆ ಎಂದಿದ್ದಾರೆ.
Kshetra Samachara
20/08/2022 10:32 am