ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಆ.20 ರಂದು ವರೂರು ಗ್ರಾಮದಲ್ಲಿ ಗ್ರಾಮಸಭೆ

ಕುಂದಗೋಳ : ಮತಕ್ಷೇತ್ರದ ವರೂರ ಗ್ರಾಮ ಪಂಚಾಯತ್ ವತಿಯಿಂದ ಅ.20 ರಂದು ಬೆಳಿಗ್ಗೆ 10.30 ಕ್ಕೆ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.‌ ಆ.19 ರಂದು ಕಂಪ್ಲಿಕೊಪ್ಪ ಹಾಗೂ ವರೂರ ಗ್ರಾಮಗಳ ವಾರ್ಡ್ ಸಭೆಗಳು ಜರುಗಲಿವೆ.

ವಿವಿಧ ಇಲಾಖೆಯಿಂದ ಕೈಗೊಳ್ಳುವ ಯೋಜನೆಗಳ ಬಗ್ಗೆ ಇಲಾಖಾವಾರು ಚರ್ಚೆ, ನರೇಗಾ ಯೋಜನೆ ಕಾಮಗಾರಿಗಳು, ಕರ ವಸೂಲಾತಿ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆಗಳು ಗ್ರಾಮ ಸಭೆಯಲ್ಲಿ ನಡೆಯಲಿವೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಬೇಕೆಂದು ವರೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/08/2022 04:00 pm

Cinque Terre

5.88 K

Cinque Terre

0

ಸಂಬಂಧಿತ ಸುದ್ದಿ