ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಯಣ್ಣನ ಉತ್ಸವಕ್ಕೆ ಕಡಗಣನೆ ಆರೋಪ; ಮುತ್ತಣ್ಣವರ ವಿರುದ್ಧ ಆಕ್ರೋಶ

ಹುಬ್ಬಳ್ಳಿ: ಹೌದು ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಉತ್ಸವ ಸಮಯದಲ್ಲಿ ನಡೆಯುವ ಇನ್ನೊಂದು ಹಬ್ಬ ಅಂದರೆ ಸಂಗೊಳ್ಳಿ ರಾಯಣ್ಣ ಹಬ್ಬ ಇಂತಹ ಸಂಗೊಳ್ಳಿ ರಾಯಣ್ಣ ಉತ್ಸವ ಬಗ್ಗೆ ಈಗ ಅಪಸ್ವರ ಎದ್ದಿದ್ದು ತಮ್ಮನ್ನು ಕಡೆಗಣನೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಶಕ್ತಿ ಸಂಘಟನೆ ಅಧ್ಯಕ್ಷ ಚನ್ನಪ್ಪಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಳೆದ ಎರಡು ದಿನದ ಹಿಂದೆ ಸಂಗೊಳ್ಳಿ ರಾಯಣ್ಣ ಉತ್ಸವ ಮಾಡುವ ಸಲುವಾಗಿ ಪಾಲಿಕೆಗೆ ಅನುಮತಿ ಕೇಳಲಾಗಿತ್ತು ಅಂತೆ ಆದರೆ ಈ ವೇಳೆ ಮೇಯರ್ ಹಾಗೂ ಅಧಿಕಾರಿಗಳು ಕಾರ್ಯಕ್ರಮಕ್ಕೆ 2.5 ಲಕ್ಷ ಅನುದಾನ ನೀಡಿ, ಪಾಲಿಕೆ ಸದಸ್ಯ ಬೀರಪ್ಪ ಗಂಡಳೆಕಾರ ಹಾಗೂ ಸಮಾಜದ ನೇತೃತ್ವದಲ್ಲಿ ಉತ್ಸವ ನಡೆಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ

ಆದರೆ ಏಕಾಏಕಿ ಇಂದು ಪತ್ರಿಕಾಗೋಷ್ಠಿ ನಡೆಸಿದ್ದ ಶಿವಾನಂದ ಮುತ್ತಣ್ಣವರ ಪ್ರಮುಖ ವ್ಯಕ್ತಿಗಳ ಹಾಗೂ ಇನ್ನೊಂದು ಸಂಘಟನೆ ಹೆಸರನ್ನು ಉದ್ದೇಶಪೂರ್ವಕವಾಗಿ ಆಮಂತ್ರಣ ಪತ್ರಿಕೆಯಲ್ಲಿ ಕೈ ಬಿಟ್ಟಿದ್ದು ,ರಾಜಕೀಯ ಉದ್ದೇಶ ಇಟ್ಟುಕೊಂಡು ತಮ್ಮ ಹೆಸರು ಮಾಡಿಕೊಳ್ಳಲು ಕಾರ್ಯಕ್ರಮ ರೂಪುರೇಶ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ

ಸದ್ಯ ರಾಯಣ್ಣ ಉತ್ಸವಕ್ಕೆ ಎರಡು ದಿನ ಬಾಕಿ ಇದ್ದು ಇದೀಗ ಅಸಮಾಧಾನ ಹೊಂದಿರುವ ಮುಖಂಡರು ಮೇಯರ್ ಹಾಗೂ ಕಮಿಷನರ್ ಗೆ ದೂರು ನೀಡಲು ಮುಂದಾಗಿದ್ದಾರೆ ,ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ

Edited By : Nagesh Gaonkar
Kshetra Samachara

Kshetra Samachara

13/08/2022 09:38 pm

Cinque Terre

22.99 K

Cinque Terre

0

ಸಂಬಂಧಿತ ಸುದ್ದಿ