ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರ ಬಿಟ್ಟು ಕೊಡದ ಕಲಘಟಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ

ಕಲಘಟಗಿ: ಕಲಘಟಗಿ ಪಟ್ಟಣದಲ್ಲಿ ಸುಮಾರು 17 ವಾರ್ಡ್‌ಗಳಿದ್ದು ಪಟ್ಟಣದ ಪಂಚಾಯತ್ ಚುನಾವಣೆಯಲ್ಲಿ 17 ವಾರ್ಡ್‌ಗಳಲ್ಲಿ 9 ಬಿಜೆಪಿ, 3 ಪಕ್ಷೇತರ, 2 ಜೆಡಿಎಸ್ ಹಾಗೂ 3 ಕಾಂಗ್ರೆಸ್ ಜಯಗಳಿಸಿದ್ದವು. ಅದರಲ್ಲಿ ಪಕ್ಷೇತರರು ಬಿಜೆಪಿ ಸೇರ್ಪಡೆಯಾಗಿದ್ದು ಒಟ್ಟು 12 ಸ್ಥಾನ ಗಿಟ್ಟಿಸಿಕೋಂಡಿದ್ದರು.

ಬಹುಮತ ಸಾಧಿಸಿದ ಬಿಜೆಪಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹದಿನೈದು ತಿಂಗಳು ಹಂಚಿಕೊಂಡ ಇಲ್ಲಿಯ ಸದಸ್ಯರು ಮೊಟ್ಟ ಮೊದಲು ಅದ್ಯಕ್ಷ ಸ್ಥಾನಕ್ಕೆ ಅನಸೂಯಾ ಹೆಬ್ಬಳ್ಳಿಮಠ ಅವರನ್ನು ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲವ್ವ ಶಿಗ್ಲಿ ಆಯ್ಕೆ ಗೋಂಡಿದ್ದರು.

ಹದಿನೈದು ತಿಂಗಳು ಕಾಲ ಅಧಿಕಾರ ನಡೆಸಿದ ಇವರು ಇಗಾ ಉಪಾಧ್ಯಕ್ಷ ಸ್ಥಾನದಿಂದ ಯಲ್ಲವ್ವ ಶಿಗ್ಲಿ ಯವರು ರಾಜಿನಾಮೆ ನಿಡಿದ್ದು ಅದ್ಯಕ್ಷ ಸ್ಥಾನಕ್ಕೆ ಅನೂಸೂಯ ಹೆಬ್ಬಳ್ಳಿಮಠ ರವರು ರಾಜಿನಾಮೆ ನಿಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಬೆಸತ್ತ ಸದಸ್ಯರು ಅವಿಶ್ವಾಸ ನೀಡಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಾಳೆ (ಜು.25 ರಂದು) ಪಟ್ಟಣ ಪಂಚಾಯತನಲ್ಲಿ ಸಭೆ ಕರೆಯಲಾಗಿದ್ದು ಮುಂದಿನ ನಡೆ ಎನಾಗಬಹುದು ಎಂದು ಕಾದುನೋಡಬೇಕಾಗಿದೆ.

ವರದಿ: ಉದಯ ಗೌಡರ

Edited By : Vijay Kumar
Kshetra Samachara

Kshetra Samachara

24/07/2022 08:32 pm

Cinque Terre

12.66 K

Cinque Terre

0

ಸಂಬಂಧಿತ ಸುದ್ದಿ