ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಿಎಸ್‌ಟಿ ಬಗ್ಗೆ ರಾಜ್ಯದಿಂದ ಮೇಲ್ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತಿದೆ; ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಜಿಎಸ್‌ಟಿ ಅವಧಿ ವಿಸ್ತರಣೆಗೆ ಕೌನ್ಸಿಲ್ ಎಂಬುದಿದೆ. ಅಲ್ಲಿ ಎಲ್ಲವೂ ನಿರ್ಧಾರ ಆಗಲಿದೆ. ಎಲ್ಲ ರಾಜ್ಯಗಳ ಸದಸ್ಯರು ಅಲ್ಲಿ ಬಂದಿರುತ್ತಾರೆ. ವಿಸ್ತೃತ ಚರ್ಚೆ ಆಗುತ್ತದೆ. ಅಲ್ಲಿ ಯಾಕೆ ಇವರು ಚರ್ಚೆ ಮಾಡಲಿಲ್ಲ? ಅದು ಬಿಟ್ಟು ಇದೀಗ ಮೊಸರು, ಮಜ್ಜಿಗೆ ಮತ್ತೊಂದಕ್ಕೆ ಬೆಲೆ ಏರಿಕೆ ಮಾಡಲಾಗಿದೆ ಎಂದು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹರಿಹಾಯ್ದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ನಗರದ ರಸ್ತೆಗಳು ಹಾಳಾಗಿವೆ. ಜನರಿಗೆ ಸಮಸ್ಯೆ ಆಗುವ ಕಾರಣಕ್ಕೆ ಅವಸರ ಮಾಡಿ ತಗ್ಗು-ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಇದರಿಂದ ಮತ್ತೆ ಮಳೆಗೆ ರಸ್ತೆ ಹದಗೆಡುವ ಪರಿಸ್ಥಿತಿ ಇರಲಿದೆ. ಹೀಗಾಗಿ ಬಿಸಿಲು ಬೀಳುವವರೆಗೆ ಕಾದು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕೆಂದು ಪಾಲಿಕೆ ಆಯುಕ್ತರಿಗೆ ಈಗಾಗಲೇ ತಿಳಿಸಿದ್ದೇನೆ ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ಜನಪ್ರತಿನಿಧಿಗಳಿಗೆ ತಿಳಿಸುವ ಕೆಲಸ ಆಗಲಿ. ನಾವು ಕೂಡಾ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುವೆ. ಅಲ್ಲದೇ ತನಿಖೆಗೆ ಒತ್ತಾಯಿಸುವೆ. ಕಳಪೆಯಾಗಿದ್ದರೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/07/2022 08:17 pm

Cinque Terre

181.05 K

Cinque Terre

13

ಸಂಬಂಧಿತ ಸುದ್ದಿ