ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅತಿಯಾದ ಮಳೆ- ಶಾಸಕ ಸಿ.ಎಂ.ನಿಂಬಣ್ಣವರ ತುರ್ತು ಸಭೆ !

ಕಲಘಟಗಿ: ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಇಂದು ಕಲಘಟಗಿ ತಾಲೂಕ ಪಂಚಾಯತ್ ನಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ತಾಲೂಕ ಮಟ್ಟದ ಅಧಿಕಾರಿಗಳನ್ನು ತುರ್ತು ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ತಾಲೂಕಿನಲ್ಲಿ ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳು ಮುಚ್ಚುವ ಬಗ್ಗೆ ಹಾಗೂ ಶಾಲೆಗಳು ಸೋರುತ್ತಿರುವುದರಿಂದ ಅದರ ಬಗ್ಗೆ ಕೂಡಲೆ ದುರಸ್ಥಿ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.

ಶಾಲಾ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬಸ್ಸುಗಳು ಇರದೆ ಕಾರಣ, ಬಸ್ಸುಗಳ ಸೂಕ್ತ ವ್ಯವಸ್ಥೆ ಮಾಡಿ ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಬಗ್ಗೆ ರೈತರಿಗೆ ಸಮರ್ಪಕವಾಗಿ ಗೊಬ್ಬರ ತಲುಪಿಸಿ ಅವರ ಅನಾನುಕೂಲಗಳನ್ನು ಬಗೆ ಹರಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ವರದಿ: ಉದಯ ಗೌಡರ

Edited By : Manjunath H D
Kshetra Samachara

Kshetra Samachara

11/07/2022 01:45 pm

Cinque Terre

16.45 K

Cinque Terre

3

ಸಂಬಂಧಿತ ಸುದ್ದಿ