ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಂವಿಧಾನದ ವಿರೋಧ ನೀತಿಯನ್ನು ಖಂಡಿಸಿ ಮನವಿ

ಅಣ್ಣಿಗೇರಿ: ಸಾಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರ ಪಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಸತ್ಯ ಪ್ರತಿಪಾದನ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಬೇಡ ಜಂಗಮದ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಬಿ.ಡಿ. ಹಿರೇಮಠ ಹಾಗೂ ಹಲವಾರು ಮಠಾಧೀಶರನ್ನು ಪೊಲೀಸರು ಬಂಧಿಸಿದ್ರು. ಇದನ್ನ ಖಂಡಿಸಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ತಾಲೂಕು ದಂಡಾಧಿಕಾರಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಈ ಕಾನೂನು ಬಾಹಿರ ಕ್ರಮವನ್ನು ತಿದ್ದಿಕೊಂಡು ಸತ್ಯ ಪ್ರತಿಪಾದನ ಹೋರಾಟವನ್ನು ಗೌರವಿಸಿ ಸಂವಿಧಾನದ ಪ್ರಕಾರ ಬೇಡ ಜಂಗಮರ ಪ್ರಮಾಣಪತ್ರವನ್ನು ನ್ಯಾಯಯುತವಾಗಿ ನೀಡಬೇಕೆಂದು ಈ ಮೂಲಕ ವಿನಂತಿಸಿಕೊಂಡರು.

Edited By :
Kshetra Samachara

Kshetra Samachara

09/07/2022 08:09 pm

Cinque Terre

11.47 K

Cinque Terre

0

ಸಂಬಂಧಿತ ಸುದ್ದಿ