ಕುಂದಗೋಳ : ಸದಾ ಸಾಮಾಜಿಕ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿರುವ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ನಿಮಿತ್ತ ಕುಂದಗೋಳ ಪಟ್ಟಣದಲ್ಲಿ ನಿರ್ಮಾಣವಾದ ನೂತನ ಶಾದಿಮಹಲ್'ಗೆ ಫ್ಯಾನ್ ಗಳನ್ನು ಉಡುಗೂರೆಯಾಗಿ ನೀಡಿದ್ದಾರೆ.
ಹೌದು…ಮುಸ್ಲಿಂ ಬಾಂಧವರ ಕೋರಿಕೆ ಕೇಳಿ ಸಮಸ್ತ ಮುಸ್ಲಿಂ ಬಾಂಧವರ ಶಾದಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ನೆರವಾಗಲು ಫ್ಯಾನ್ ಕೊಡುಗೆ ನೀಡಿದ ರಮೇಶ್ ಕೊಪ್ಪದ ಅವರಿಗೆ ಮುಸ್ಲಿಂ ಬಾಂಧವರು ಸನ್ಮಾನ ಮಾಡಿ ಹಾರೈಸಿದ್ದಾರೆ.
ಅದರಂತೆ ಇತ್ತೀಚೆಗೆ ಸತತ ಹತ್ತು ವರ್ಷಗಳ ಹೋರಾಟದ ಫಲವಾಗಿ ನೂತನ ಗ್ರಾಮ ಪಂಚಾಯಿತಿಯಾಗಿ ರಚನೆಯಾದ ಬರದ್ವಾಡ ಗ್ರಾಮಸ್ಥರನ್ನು ಭೇಟಿಯಾದ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಗ್ರಾಮಸ್ಥರ ಹೋರಾಟ ಹೊಗಳಿ ಸಿಹಿ ಹಂಚಿ ಗ್ರಾಮಸ್ಥರ ಜೊತೆ ಸಂಭ್ರಮ ಆನಂದಿಸಿದ್ದಾರೆ.
ಶಾದಿಮಹಲ್ ಫ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಸಮಸ್ತ ಮುಸ್ಲಿಂ ಗಣ್ಯರು, ಹಾಗೂ ಬರದ್ವಾಡ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
Kshetra Samachara
09/07/2022 01:02 pm