ಕುಂದಗೋಳ : ಬೇಡಜಂಗಮ ಹಕ್ಕನ್ನು ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ನಿಯಮ ಸರಿಯಲ್ಲ. ಈ ವಿಷಯದಲ್ಲಿ ಹೋರಾಟದಲ್ಲಿ ತೊಡಗಿದ್ದ ಬೇಡ ಜಂಗಮ ಹೋರಾಟದ ಮುಖಂಡ ಬಿ.ಡಿ.ಹಿರೇಮಠ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಇಂದು ಬೇಡ ಜಂಗಮ ತಾಲೂಕು ಘಟಕದಿಂದ ಧರಣಿ ಕೈಗೊಂಡಿದ್ದಾರೆ.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸುತ್ತಾ ತಹಶೀಲ್ದಾರ ಕಚೇರಿ ತಲುಪಿದ ಚನ್ನಬಸವದೇವರು ಮರುಘೇಂದ್ರದೇವರು ವಿರಕ್ತಮಠ ಇವರ ನೇತೃತ್ವದ ಹೋರಾಟ ಶಿರಸ್ತೇದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡ ಜಂಗಮ ಮೀಸಲಾತಿ ಹಾಗೂ ಅಧ್ಯಕ್ಷ ಬಿ.ಡಿ ಹಿರೇಮಠ ಬಿಡುಗಡೆಗೆ ಒತ್ತಾಯ ಮಾಡಿದರು.
Kshetra Samachara
07/07/2022 10:45 pm