ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ನಾಟಕ ನೀರಾವರಿ ನಿಗಮದ ಮುಂದೆ ರಂಗೋಲಿ ಬಿಡಿಸಿದ ರೈತ ಮಹಿಳೆಯರು

ಧಾರವಾಡ: ರಾಜ್ಯದ 22 ಜಿಲ್ಲೆಗಳಿಗೆ ಪ್ರಮುಖ ಕಚೇರಿಯಾದ ಧಾರವಾಡದ ಕರ್ನಾಟಕ ನಿರಾವರಿ ನಿಗಮದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕಚೇರಿಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು ಕಚೇರಿ ಮುಂಭಾಗದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ರೈತ ಮಹಿಳೆಯರು ಬುಧವಾರ ಬೆಳಿಗ್ಗೆ ಕಚೇರಿ ಮುಂಭಾಗದ ಕಸ ಗುಡಿಸಿ, ರಂಗೋಲಿ ಹಾಕುವ ಮೂಲಕ ಎರಡನೇ ದಿನದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಈ ನಿಗಮದಲ್ಲಿ ಆದ ಭ್ರಷ್ಟಾಚಾರದ ಕುರಿತ ದಾಖಲೆಪತ್ರಗಳನ್ನು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ರಾಜ್ಯಪಾಲರನ್ನೂ ಭೇಟಿ ಮಾಡಿ ನಿಗಮದಲ್ಲಿನ ಭ್ರಷ್ಟಾಚಾರದ ಕುರಿತು ಅವರ ಗಮನಕ್ಕೆ ತಂದು, ಹತ್ತು ದಿನಗಳ ಒಳಗಾಗಿ ಈ ನಿಗಮದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೆವು. ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ರೈತರು ನಿಗಮದ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

Edited By : Shivu K
Kshetra Samachara

Kshetra Samachara

22/06/2022 10:59 am

Cinque Terre

21.04 K

Cinque Terre

0

ಸಂಬಂಧಿತ ಸುದ್ದಿ