ನವಲಗುಂದ : ಕಳೆದ ನಾಲ್ಕು ದಿನಗಳ ಹಿಂದೆ ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಸುರಿದ ಮಳೆಗೆ ಗ್ರಾಮದಲ್ಲಿ ಹಳ್ಳದ ನೀರಿನ ಹರಿವು ಹೆಚ್ಚಾಗಿ ಸರ್ಕಾರಿ ಫ್ರೌಢಶಾಲೆಯ ಆವರಣಕ್ಕೆ ನುಗ್ಗಿತ್ತು.
ಈ ಹಿನ್ನೆಲೆ ಸುಮಾರು 150 ವಿದ್ಯಾರ್ಥಿಗಳು ಶಾಲೆಯಲ್ಲೇ ಸಿಲುಕಿದ್ದರು. ಈ ಘಟನೆ ಹಿನ್ನೆಲೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದರು.
ಹೌದು ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಗ್ರಾಮ. ಘಟನೆಯಿಂದ ಸಚಿವರ ಸ್ವಗ್ರಾಮದಲ್ಲೇ ಹೀಗಾದ್ರೆ ಹೇಗಪ್ಪಾ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲೂ ಕೇಳಿ ಬಂದಿತ್ತು.
ಆದರೆ ಸೋಮವಾರ ಸಚಿವ ಮುನೇನಕೊಪ್ಪ ಅವರು ಘಟನೆ ನಡೆದ ಶ್ರೀ ಅಡಿವೆಪ್ಪಗೌಡ ಶಿದ್ದನಗೌಡ ಪಾಟೀಲ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮಸ್ಥರು ನೀಡಿದ ಮನವಿಗಳನ್ನು ಸ್ವಿಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಶೀಘ್ರವಾಗಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಯಿತು.
Kshetra Samachara
21/06/2022 08:44 am