ನವಲಗುಂದ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಸೋಮವಾರ ನವಲಗುಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭವಾಗಿ ಸಂಜೆ 5ರ ವರೆಗೆ ಶಾಂತಿಯುತವಾಗಿ ಜರುಗಿತು.
ನವಲಗುಂದ ತಾಲೂಕಿನಲ್ಲಿ 160 ಪುರುಷರು, 64 ಮಹಿಳೆಯರು ಸೇರಿ ಒಟ್ಟು 224 ಶಿಕ್ಷಕರ ಮತವಿತ್ತು. ಅದರಲ್ಲಿ 146 ಪುರುಷರು ಹಾಗೂ 54 ಮಹಿಳೆಯರು ಸೇರಿ ಒಟ್ಟು 200 ಮಂದಿ ಮತದಾನ ಮಾಡಿದ್ದು, ಸಂಜೆ ವೇಳೆಗೆ 89.29% ರಷ್ಟು ಮತದಾನವಾಗಿದೆ.
Kshetra Samachara
13/06/2022 09:57 pm