ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತದಾರರ ಮೇಲೆ ಪ್ರಭಾವ; ಸಿಬ್ಬಂದಿ- ಅಧಿಕಾರಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಹುಬ್ಬಳ್ಳಿ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾನ ವೇಳೆ ಇಲ್ಲಿಯ ಕಾರವಾರ ರಸ್ತೆಯ ಬಾಸೆಲ್ ಮಿಶನ್ ಸ್ಕೂಲ್ ನಲ್ಲಿರುವ ಮತಗಟ್ಟೆ ನಂ. 26 ರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮತದಾನ ವೇಳೆಯಲ್ಲಿ ಕ್ರಮವಾಗಿ ಮತ ಚಲಾಯಿಸುವಂತೆ ಮತಗಟ್ಟೆ ಅಧಿಕಾರಿ ಶಶಿಕಾಂತ ಮಂಟೂರ ಮತ್ತು ಕೆಲ ಸಿಬ್ಬಂದಿ ಹೇಳುತ್ತಿದ್ದಾರೆ. ಕ್ರಮವಾಗಿ ಪ್ರಾಶಸ್ತ್ಯದ ಮತ ನೀಡಲು ಹೇಳಲಾಗುತ್ತಿದೆ. ತಕ್ಷಣವೇ ಸಿಬ್ಬಂದಿ ಮತ್ತು ಅಧಿಕಾರಿಯನ್ನು ಬದಲಾವಣೆ ಮಾಡಬೇಕೆಂದು ವಸಂತ ಹೊರಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಮತ ಪತ್ರದ ಕ್ರಮ ಸಂಖ್ಯೆ 01 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ, ಕ್ರಮ ಸಂಖ್ಯೆ 02 ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಹೆಸರಿದೆ. ಅಧಿಕಾರಿಗಳು ಹೀಗೆ ಹೇಳುವುದರಿಂದ ಪ್ರಾಶಸ್ತ್ಯ ದ ಮತ ನೀಡಲು ಮತದಾರರಲ್ಲಿ ಗೊಂದಲವಾಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಅಧಿಕಾರಿಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದರು.

ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಬಳಿಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಾತಾವರಣ ತಿಳಿಗೊಳಿಸಿದರು.

ಘಟನೆ ಬಳಿಕ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಶಿಕ್ಷಕ ಮತದಾರರಾದ ಶಿಬಾ ಪ್ರತಾಪನ್, ಆರ್.‌ಎಂ. ವರಕೋಟಿ ಹಾಗೂ ಸುನೀಲ ನಾಜರೆ ಅವರಿಂದ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಲಾಯಿತು.

ಈ ಆರೋಪದ ಹಿನ್ನೆಲೆಯಲ್ಲಿ ಶಶಿಕಾಂತ ಮಂಟೂರ ಅವರನ್ನು ಬದಲಾಯಿಸಿದ ಚುನಾವಣಾ ಆಯೋಗ, ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಿತು.

Edited By : Manjunath H D
Kshetra Samachara

Kshetra Samachara

13/06/2022 03:25 pm

Cinque Terre

19.02 K

Cinque Terre

0

ಸಂಬಂಧಿತ ಸುದ್ದಿ