ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ವಿವಿಧ ಊರುಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆಯುತ್ತಿದ್ದು, ಪ್ರಸಕ್ತ ವರ್ಷ ಗುರಿಕಾರ ಅವರು ಗೆಲುವಿನ ಗುರಿ ಹೊಂದಿದ್ದಾರೆ. ಈಗಾಗಲೇ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಕೆಲಸಗಳನ್ನು ಮಾಡಿರುವ ಗುರಿಕಾರ, ಶಿಕ್ಷಕರಿಗೆ ಹತ್ತಿರವಾದ ವ್ಯಕ್ತಿಯಾಗಿದ್ದಾರೆ.
ನಿನ್ನೆ ಹುಬ್ಬಳ್ಳಿಯ ಜೆ.ಕೆ.ಕನ್ನಡ ಮಾಧ್ಯಮ ಶಾಲೆ, ಎಸ್.ಟಿ.ಮರ್ಯಾಸ್, ಫಾತಿಮಾ ಹೈಸ್ಕೂಲ್, ಮೆಕಾಲೆ ಹೈಸ್ಕೂಲ್, ಅಂಜುಮನ್ ಹೈಸ್ಕೂಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಶಿಕ್ಷಕರು ಕೂಡ ಗುರಿಕಾರ ಅವರಿಗೆ ಸಕಾರಾತ್ಮಕ ಸ್ಪಂದನೆ ನೀಡಿದರು.
ಸತತ ಏಳು ಬಾರಿ ಗೆದ್ದಿರುವ ಬಸವರಾಜ ಹೊರಟ್ಟಿ ಅವರಿಗೆ ಈ ವರ್ಷ ಬಸವರಾಜ ಗುರಿಕಾರ ಅವರು ನೇರಾ ನೇರ ಠಕ್ಕರ್ ನೀಡಲು ಸಜ್ಜಾಗಿದ್ದಾರೆ. ಈಗಾಗಲೇ ನಾಲ್ಕೂ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಚಾರ ನಡೆಸುತ್ತಿರುವ ಗುರಿಕಾರ ಅವರಿಗೆ ಪ್ರಸಕ್ತ ವರ್ಷ ಗೆಲುವು ಖಚಿತ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ರವಿಕುಮಾರ ಜಮಖಂಡಿ, ಮಂಜುನಾಥ ಕಿತ್ತೂರ, ಎಸ್.ಕೆ.ರಾಮದುರ್ಗ, ಆನಂದ ಕುಲಕರ್ಣಿ, ಸತೀಶ ಗಿರಿಯಣ್ಣವರ, ಪ್ರವೀಣ ಅದರಗುಂಚಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/05/2022 04:03 pm