ನವಲಗುಂದ: ಚುನಾವಣೆ ನಿಲ್ಲುವಂತವರು ತಾವು ಗೆಲ್ಲಬೇಕು ಎಂದು ಪ್ರಯತ್ನ ಮಾಡ್ತಾರೆ. ಅವರ ಪ್ರಯತ್ನ ಅವರೊಂದಿಗೆ, ನಮ್ಮ ಪ್ರಯತ್ನ ನಮ್ಮೊಂದಿಗೆ. ಆದ್ರೆ ಯಾವ ಪ್ರಯತ್ನಗಳೂ ನನ್ನ ಮುಂದೆ ಈ ಬಾರಿ ನಡೆಯುವುದಿಲ್ಲ ಎಂದು ನವಲಗುಂದದಲ್ಲಿ ಬಸವರಾಜ ಹೊರಟ್ಟಿ ಹೇಳಿದರು.
ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯ ಪ್ರಚಾರಕ್ಕೆಂದು ನವಲಗುಂದಕ್ಕೆ ಆಗಮಿಸಿದ ಬಸವರಾಜ ಹೊರಟ್ಟಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಜಾ ಪ್ರಭುತ್ವದಲ್ಲಿ ಚುನಾವಣೆಗೆ ಎಲ್ಲಾ ಪಕ್ಷದಿಂದ ಸ್ಪರ್ಧಿಸುತ್ತಾರೆ. ನಮ್ಮ ಶಕ್ತಿ ಪ್ರದರ್ಶನವನ್ನು ನೋಡುತ್ತೀರಿ. ಯಾವಾಗಲೂ ಚುನಾವಣೆಗೆ ನಿಲ್ಲುವಂತವರು ತಮ್ಮ ತಮ್ಮ ಶಕ್ತಿಗೆ ಅನುಗುಣವಾಗಿ ಮಾಡುತ್ತಾರೆ. ಚುನಾವಣೆ ನಿಲ್ಲುವಂತವರು ತಾವು ಗೆಲ್ಲಬೇಕು ಎಂದು ಪ್ರಯತ್ನ ಮಾಡ್ತಾರೆ. ಅವರ ಪ್ರಯತ್ನ ಅವರೊಂದಿಗೆ ನಮ್ಮ ಪ್ರಯತ್ನ ನಮ್ಮೊಂದಿಗೆ, ಯಾವ ಪ್ರಯತ್ನಗಳು ನನ್ನ ಮುಂದೆ ಈ ಬಾರಿ ನಡೆಯುವುದಿಲ್ಲ ಎಂದರು.
ನವಲಗುಂದ ತಾಲ್ಲೂಕಿನಲ್ಲಿ ಎರಡುನೂರ ಹದಿನೈದು ಮತಗಳಿವೆ. ಎಲ್ಲಾ ಮತಗಳು ನನಗೆ ಬರ್ತವೆ ಅಂತಾ ನಾನು ಬರೆದು ಕೊಡ್ತೀನಿ. ಯಾಕಂದ್ರೆ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಶಿಕ್ಷಕರು ನನ್ನ ಕೈ ಬಿಡುವುದಿಲ್ಲ. ಶಿಕ್ಷಕರ ಮನಸ್ಸಿನಲ್ಲಿ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/05/2022 07:59 pm