ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಗೆ ‘ಮಾನೆ ಹೆಸರಿಟ್ಟ ಅಭಿಮಾನಿ : ಇದು ಶಾಸಕರ ಮೇಲಿರುವ ಜನರ ಗೌರವ

ಹಾವೇರಿ : ರಾಜಕಾರಣಿಯೊಬ್ಬರು ತನ್ನ ಸಮಾಜಮುಖಿ ಕೆಲಸ ಕಾರ್ಯಗಳಿಂದ ಜನ ಮನಗೆದ್ದರೆ ಏನೆಲ್ಲಾ ಸಂಭವಿಸಬಹುದು ಎನ್ನುವುದಕ್ಕೆ ಇದೊಂದು ಬೆಸ್ಟ್ ಉದಾಹರಣೆ.

ಹೌದು ಹಾನಗಲ್ ತಾಲೂಕಿನ ಎಂ.ಟಿ.ಯತ್ತಿನಹಳ್ಳಿ ಎಂಬ ಗ್ರಾಮದ ನಿವಾಸಿ ಶ್ರೀ ಮಹಾಬಲೇಶ್ವರ ತೋಟಗೇರ ಎಂಬವರ ಗೃಹಪ್ರವೇಶವು ಮೊನ್ನೆಯಷ್ಟೇ ನಡೆಯಿತು. ಅದರಲ್ಲೇನು ವಿಶೇಷ ಅಂತೀರಾ? ಇರೋದು ನೋಡಿ ವಿಷಯ.

ಈ ಮನೆಗೆ ಅವರಿಟ್ಪ ಹೆಸರು 'ಮಾನೆ ನಿಲಯ'. ಇದು ಅಲ್ಲಿನ ಶಾಸಕ ಶ್ರೀ ಶ್ರೀನಿವಾಸ ಮಾನೆಯವರ ಮೇಲಿನ ಅಭಿಮಾನದಿಂದ ಇಟ್ಟ ಹೆಸರು. ಇವರಾರು ಶ್ರೀ ಶ್ರೀನಿವಾಸ ಮಾನೆಯವರ ಸಂಬಂಧಿಕರಲ್ಲ. ಆದರೂ ಅವರ ಮೇಲಿಟ್ಟ ಪ್ರೀತಿ ಅಭಿಮಾನ ಎಲ್ಲಕ್ಕಿಂತ ಹೆಚ್ಚು.

ಶಾಸಕ ಮಾನೆಯವರ 'ಶಾಸಕರ ನಡಿಗೆ ಹಳ್ಳಿಗಳ ಕಡೆಗೆ' ಎಂಬ ಕಾರ್ಯಕ್ರಮವೂ ಇವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಉಪಚುನಾವಣೆಯಲ್ಲಿ ಜಯಭೇರಿ ಗಳಿಸಿದಾಗ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ 'ಮಾನೆಯವರ ಜನಪರ ಕೆಲಸಗಳೇ ಅವರ ಕೈ ಹಿಡಿದಿದೆ'. ಎಂಬ ಮಾತುಗಳು ಅಕ್ಷರಶಃ ಸತ್ಯ. ಅಷ್ಟೇ ಅಲ್ಲದೆ ಸಾರ್ವಜನಿಕರ ಎಲ್ಲಾ ರೀತಿಯ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವುದರಲ್ಲೂ ಯಶಸ್ವಿಯಾಗಿದ್ದಾರೆ.

ಈ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಶಾಸಕರು ಖುದ್ದು ಭಾಗವಹಿಸಿ ಸಂಭ್ರಮಿಸಿದರು. ಸಾಮಾನ್ಯ ಅಭಿಮಾನಿಯ ಸಂತಸದಲ್ಲಿ ಭಾಗವಹಿಸಿದ ಮಾನೆ ಮನೆಯವರಿಗೆ ಒಳಿತಾಗಲಿ ಎಂದು ಹಾರೈಸಿದರು.

ಮಾನೆಯವರ ಸಮಾಜಸೇವೆಯು ಇದೇ ರೀತಿ ಮುಂದುವರೆದಲ್ಲಿ ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲೂ ಜಯಭೇರಿ ಬಾರಿಸುವುದು ಖಚಿತ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/05/2022 07:54 pm

Cinque Terre

59.17 K

Cinque Terre

2

ಸಂಬಂಧಿತ ಸುದ್ದಿ