ಧಾರವಾಡ: ಇತ್ತೀಚೆಗೆ ನಿಧನರಾದ ನಾಡಿನ ಹೆಸರಾಂತ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ನಿವಾಸಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿದರು.
ಧಾರವಾಡದ ಕಲ್ಯಾಣ ನಗರದಲ್ಲಿರುವ ಕಣವಿ ಅವರ ಮನೆಗೆ ಭೇಟಿ ನೀಡಿದ ಮೊಯ್ಲಿ, ಕಣವಿ ಅವರು ನಿಧನರಾದಾಗ ಕಾರಣಾಂತರಗಳಿಂದ ಭೇಟಿ ನೀಡಲು ಆಗಲಿಲ್ಲ. ಹೀಗಾಗಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿದ್ದೇನೆ ಎಂದರು.
ಕಣವಿ ಅವರ ಪುತ್ರ ಹಾಗೂ ಅವರ ಕುಟುಂಬಸ್ಥರೊಂದಿಗೆ ಮೊಯ್ಲಿ ಅವರು ಮಾತುಕತೆ ನಡೆಸಿದರು.
Kshetra Samachara
10/05/2022 01:38 pm