ನವಲಗುಂದ : ಕಳೆದ ಒಂದೂವರೆ ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೆನೆಗುಂದಿಗೆ ಬಿದ್ದಿತ್ತು. ಆದರೆ ಇಂದು ನಡೆದ ಚುನಾವಣೆಯಲ್ಲಿ ನೂತನವಾಗಿ ಅಪ್ಪಣ್ಣ ಬಾಗಪ್ಪ ಹಳ್ಳದ ಅಧ್ಯಕ್ಷ ಸ್ಥಾನ ಪಡೆದರೇ, ಪದ್ಮಾವತಿ ಪೂಜಾರ ಉಪಾಧ್ಯಕ್ಷರಾಗಿದ್ದಾರೆ.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಬಣ್ಣ ಎರಚುತ್ತಾ, ಡೋಳು ಬಾರಿಸುತ್ತಾ ಪುರಸಭೆ ಸಭಾಂಗಣದ ಆವರಣದಲ್ಲಿ ಕುಣಿದು ಕುಪ್ಪಳಿಸಿದರು.
ಈ ವೇಳೆ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ, ಅನಿಲ ಕುಮಾರ ಪಾಟೀಲ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೂಟಿ ಸ್ಥಳಕ್ಕೆ ಬಂದು ಬಣ್ಣದೋಕೂಳಿಯಲ್ಲಿ ಮಿಂದೆದ್ದರು.
Kshetra Samachara
06/05/2022 04:11 pm