ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜಲಧಾರೆ ಯಾತ್ರೆ ಯಶಸ್ವಿಗೆ ಜೆಡಿಎಸ್ ಅಭ್ಯರ್ಥಿ ಹಜರತ್‌ ಅಲಿ ಮನವಿ

ಕುಂದಗೋಳ : ತಾಲೂಕಿನ ಜನರ ಅತಿ ಅವಶ್ಯವಾದ ಹಾಗೂ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಜನತಾ ಜಲಧಾರೆ ಯಾತ್ರೆಯನ್ನು ಕುಂದಗೋಳ ಮತಕ್ಷೇತ್ರದಲ್ಲಿ ಯಶಸ್ವಿ ಮಾಡುವಂತೆ ಜೆಡಿಎಸ್ ಅಭ್ಯರ್ಥಿ ಹಜರತ್‌ ಅಲಿ ಜೋಡಮನಿ ಅವರು ಪಬ್ಲಿಕ್ ನೆಕ್ಸ್ಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.

ಇಂದು ಕುಂದಗೋಳ ಮತಕ್ಷೇತ್ರದ ಖಾಸಗಿ ಹೊಟೇಲ್ ಒಂದರಲ್ಲಿ ಪಬ್ಲಿಕ್ ನೆಕ್ಸ್ಟ್ ಉದ್ದೇಶಿಸಿ ಮಾತನಾಡಿದ ಅವರು, ಕುಂದಗೋಳ ತಾಲೂಕಿನ ಕಳಸ, ಗುಡಗೇರಿ, ಪಶುಪತಿಹಾಳ, ಯರೇಬೂದಿಹಾಳ, ಸಂಶಿ ಮಾರ್ಗವಾಗಿ ಹೊರಡುವ ಜನತಾ ಜಲಧಾರೆ ಯಾತ್ರೆ ಶಿರೂರು ಬಳಿಯ ಬೆಣ್ಣೆಹಳ್ಳದಲ್ಲಿ ಕುಂಭ ಕೊಡಗಳ ಮೂಲಕ ನೀರು ತುಂಬಿಕೊಂಡು ಕಮಡೊಳ್ಳಿ, ಚಿಕ್ಕಹರಕುಣಿ, ಹಿರೇಹರಕುಣಿ, ತರ್ಲಘಟ್ಟ, ಇಂಗಳಗಿ, ಹಿರೇಬೂದಿಹಾಳ, ಕುಬಿಹಾಳ, ಯಲಿವಾಳ, ಹಂಚಿನಾಳ, ದೇವನೂರು, ಕುಂದಗೋಳ, ಶರೇವಾಡ, ನೂಲ್ವಿ, ಅದರಗುಂಚಿ, ಬೆಳಗಲಿ, ಗಿರಿಯಾಲ, ಕಟ್ನೂರು, ಚನ್ನಾಪೂರ,ಅಂಚಟಗೇರಿ ಮಾರ್ಗವಾಗಿ ನವಲಗುಂದ ಅಣ್ಣಿಗೇರಿ ತಲುಪಲಿದೆ.

ಈ ಜಲಯಾತ್ರೆ ಪಶ್ಚಿಮ ಮುಖವಾಗಿ ಹರಿಯುವ ನದಿಗಳಾದ ಕಣಕುಂಬಿ, ಮಹಾದಾಯಿ, ಕಳಸಾ ಬಂಡೂರಿ ನಾಲೆ, ಕೃಷ್ಣಾ ನದಿ ಜಲಾನಯನ ಪ್ರದೇಶದ ಹಿಡಕಲ್ ಡ್ಯಾಮ್, ಘಟಪ್ರಭಾ, ಸವದತ್ತಿ, ಮಲಪ್ರಭಾ, ಹೆಬ್ಬಳ್ಳಿ, ಬೆಣ್ಣೆಹಳ್ಳ ಸವಣೂರಿನ ವರದಾ ನದಿಯ ನೀರನ್ನು ಡ್ಯಾಂ ಮೂಲಕ ಸಂಗ್ರಹಿಸಿ ಕೃಷಿ ಹಾಗೂ ಕುಡಿಯಲು ಉಪಯೋಗಿಸುವ ಯೋಜನೆ ಇದಾಗಿದೆ ಎಂದರು.

ಕುಂದಗೋಳ ಮತಕ್ಷೇತ್ರದ ಜನತೆ ಈ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡುವಂತೆ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

27/04/2022 08:26 pm

Cinque Terre

38.23 K

Cinque Terre

0

ಸಂಬಂಧಿತ ಸುದ್ದಿ