ಪಬ್ಲಿಕ್ ನೆಕ್ಸ್ಟ್ ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕಳೆದ ಎಂಟು ದಿನಗಳ ಹಿಂದೆ ಶನಿವಾರ ಹನುಮ ಜಯಂತಿ ದಿನದಂದು, ಅಭಿಷೇಕ ಹಿರೇಮಠ ಹಿಂದೂ ಯುವಕನೊಬ್ಬ ಪ್ರಚೋದನಕಾರಿ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಬಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮತ್ತು ದಿಡ್ಡಿ ಹನುಮಾನ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು.
ಇದರ ಅಂಗವಾಗಿ ಕಾಂಗ್ರೆಸ್ ನಾಯಕರು, ಬಿಜೆಪಿಯ ದೊಡ್ಡ ನಾಯಕರು ಬಂದು ಹೋಗಿದ್ದಾರೆ. ಆದರೆ ಬಿಜೆಪಿ ಸ್ಥಳೀಯ ನಾಯಕರು ಮಾತ್ರ ಘಟನಾ ಸ್ಥಳಕ್ಕೆ ಬರಲು ಹಿಂದೇಟು ಹಾಕಿದ್ರಾ ಅನ್ನೋ ಅನುಮಾನ ಜನರಲ್ಲಿ ಮೂಡಿದೆ..
ವಾಟ್ಸಾಪ್ ಸ್ಟೇಟಸ್ ಸಂಬಂಧಿಸಿದಂತೆ ಕೋಮು ಗಲಭೆಯಿಂದ ಹಳೇ ಹುಬ್ಬಳ್ಳಿ ಧಗಧಗನೆ ಉರಿಯುತ್ತಿದೆ. ಈಗಾಗಲೇ 150 ಕ್ಕೂ ಹೆಚ್ಚು ಆರೋಪಿಗಳ ಬಂಧನ ಮಾಡಿದ್ದಾರೆ. ಘಟನೆಯ ಮೂಲ ರುವಾರಿ ವಾಸಿಂ ಬಂಧನವಾಗಿ ಎರಡು ದಿನಗಳು ಕಳೆದಿದ್ದರು ಕೂಡ, ಬಿಜೆಪಿ ಸ್ಥಳೀಯ ನಾಯಕರು ಮಾತ್ರ ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಯಾಕೆ ತಡವಾಗಿ ಭೇಟಿ ನೀಡಿದ್ರಿ ಎಂದು ಕೇಳಿದ್ರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಏನು ಹೇಳುತ್ತಾರೆ ನೀವೆ ಕೇಳಿ.
ಈ ಕೋಮು ಗಲಭೆ ಘಟನೆಯ ಕುರಿತು ಆಡಳಿತ ಪಕ್ಷವು ವಿರೋಧ ಪಕ್ಷದ ಪೂರ್ವ ಸಂಚಿತವಾಗಿ ಮಾಡಿದಂತ ಸಂಚು ಎಂದು ಆರೋಪಿಸಿದರೆ. ವಿರೋಧ ಪಕ್ಷವು ಇದು ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವ ಬ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪೂರ್ವನಿಯೋಜಿತ ಸಂಚು ಎಂದು ಆರೋಪಿಸುತ್ತಿವೆ. ಒಟ್ಟಿನಲ್ಲಿ ಈ ಕೆಸರಿನ ಏರಿಚಾಟದಲ್ಲಿ ಸತ್ಯಾಸತ್ಯತೆಯ ಕೂಲಂಕುಷ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕಿದೆ.
Kshetra Samachara
23/04/2022 03:52 pm