ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ:ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕುಸುಮಾವತಿ ಚಾಲನೆ

ಕುಂದಗೋಳ: ನಿತ್ಯ ಜೀವನದಲ್ಲಿ ನೀರು ಅತಿ ಅವಶ್ಯಕ. ಅಂತಹ ಜಲದ ಸೌಲಭ್ಯ ಒದಗಿಸಲು, ಕೇಂದ್ರ ಸರ್ಕಾರದ ಜಲ ಜೀವನ್ ಮಷಿನ್ ಕಾಮಗಾರಿ ಇದೆ. ನಿಮ್ಮೂರಲ್ಲೂ ಈ ಒಂದು ಕಾಮಗಾರಿ 1 ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ಕುಂದಗೋಳ ಮತಕ್ಷೇತ್ರದ ಅಗಡಿ ಗ್ರಾಮದಲ್ಲಿ 1 ಕೋಟಿ 10 ಲಕ್ಷ ವೆಚ್ಚದ ಜಲ ಜೀವನ್ ಮಷಿನ್ ಕಾಮಗಾರಿ ಹಾಗೂ ಶಿರೂರು ಗ್ರಾಮದಲ್ಲಿ 15 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಬೆಟದೂರು ಗ್ರಾಮದಲ್ಲಿ 25 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಗಡಿ, ಬೆಟದೂರು, ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

20/04/2022 07:36 pm

Cinque Terre

22.67 K

Cinque Terre

0

ಸಂಬಂಧಿತ ಸುದ್ದಿ