ಹುಬ್ಬಳ್ಳಿ: ಬಂಧಿತರು ಅಮಾಯಕರು ಅಂತ ಇವರಿಗೆ ಹೇಗೆ ಗೊತ್ತು ? ಪೊಲೀಸರು ಇದ್ದಾರೆ. ನ್ಯಾಯಂಗ ಇದೆ. ತನಿಖೆಗೂ ಮೊದಲೆ ಅಮಾಯಕರು ಅಂತ ಹೇಗೆ ಹೇಳ್ತಿರಾ ? ಎಡಿಜಿಪಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಅಮಾಯಕರಿದ್ರೆ ಅವರೇ ಬಿಡ್ತಿವಿ ಅಂತ ಹೇಳಿದ್ದಾರೆಂದು ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆ ಇದ್ರೂ ಬಿಡಲ್ಲ. ಎಸ್ ಡಿಪಿಐ, ಪಿಎಫ್ಐ ಬಗ್ಗೆ ಕೆಲ ಪ್ರೊಸೆಸ್ ನಡಿತಿದೆ. ಇವು ರಾಜಕೀಯ ಸಂಘಟನೆಗಳು ಆಗಿರೋದ್ರಿಂದ ಅದನ್ನ ಸರ್ಕಾರಕ್ಕೆ ಹೇಳಿದ್ದೇವೆ.
ಗುಂಡಾಗಳ ಆಸ್ತಿ-ಪಾಸ್ತಿ ಜಪ್ತಿ ವಿಚಾರವಾಗಿ, ಅದನ್ನ ಎಲ್ಲಾ ಕಡೆಗಳಲ್ಲೂ ಮಾಡೋಕ್ಕಾಗಲ್ಲ.ಇರೋ ಕಾನೂನನ್ನೇ ಕಟ್ಟುನಿಟ್ಟಾಗಿ ಬಳಿಸಿದ್ರೆ ಸಾಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/04/2022 03:51 pm