ಧಾರವಾಡ: ಪ್ರಮೋದ್ ಮುತಾಲಿಕ್‌ರನ್ನು ಗಡೀಪಾರು ಮಾಡಿದರೆ ಧಾರವಾಡ ಜಿಲ್ಲೆ ಶಾಂತವಾಗಿರುತ್ತದೆ ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹುಬ್ಬಳ್ಳಿ, ಧಾರವಾಡ ಶಾಂತಿಗೆ ಹೆಸರುವಾಸಿ. ಆದರೆ, ಇಂದು ಕರಾವಳಿ ಭಾಗದ ಕರಿನೆರಳು ಧಾರವಾಡದ ಮೇಲೂ ಬಿದ್ದಿದೆ. ಇದರಲ್ಲಿ ಮುತಾಲಿಕ್ ಅವರ ನೇರ ಕೈವಾಡ ಇದೆ. ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದರು.
ನುಗ್ಗಿಕೇರಿಯಲ್ಲಿ ಗಲಾಟೆ ಮಾಡಿದವರನ್ನೂ ಗಡೀಪಾರು ಮಾಡಬೇಕು. ಎಲ್ಲರೂ ಸಹಬಾಳ್ವೆ ಶಾಂತಿಯಿಂದ ಸಮಾಜದಲ್ಲಿ ಬದುಕುವಂತಾಗಬೇಕು ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
Kshetra Samachara
12/04/2022 10:42 am