ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪುರಸಭೆ ಅಧ್ಯಕ್ಷ ಜಾಧವ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಧರಣಿ

ನವಲಗುಂದ : ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 15 ತಿಂಗಳಿನಂತೆ ಹಂಚಿಕೊಳ್ಳಲಾಗಿತ್ತು, ಈಗ ಕಾಂಗ್ರೆಸ್ ನ ಅವಧಿ ಮುಗಿದಿದ್ದರೂ ಒಪ್ಪಂದದ ಮಾತಿನಂತೆ ಅಧಿಕಾರ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಶುಕ್ರವಾರ ಪುರಸಭೆ ಎದುರು ಧರಣಿ ಪ್ರತಿಭಟನೆ ನಡೆಸಲಾಯಿತು.

ನವಲಗುಂದ ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳ ಬಹುಮತ ವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾಯಿತ ಅಭ್ಯರ್ಥಿಗಳು 15 ಹಾಗೂ 15 ತಿಂಗಳು ಕಾಲ ಹೊಂದಾಣಿಕೆ ಮೇರೆಗೆ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಜಾಧವ ಅವರನ್ನ ಪುರಸಭೆ ಅಧ್ಯಕ್ಷರಾಗಿ ಮಾಡಿ 15 ತಿಂಗಳ ಕಾಲ ಅಧಿಕಾರ ನಡೆಸಲು ಒಪ್ಪಂದ ಆಗಿತ್ತು.

ಆದರೆ ಈಗ ಅಧಿಕಾರದ ಅವಧಿ ಮುಗಿದ ಮೇಲೆ ಮೈತ್ರಿ ಮಾಡಿಕೊಂಡ ಒಪ್ಪಂದದ ಪ್ರಕಾರ ಬಿಜೆಪಿ ಸದಸ್ಯರಿಗೆ ಅಧಿಕಾರ ಬಿಟ್ಟುಕೊಡದೆ ಸಮಜಾಯಿಸುತ್ತಿದ್ದನ್ನು ಖಂಡಿಸಿ, ಬಿಜೆಪಿ ಸದಸ್ಯರನ್ನು ಒಳಗೊಂಡ ಕಾರ್ಯಕರ್ತರು ಪುರಸಭೆಯ ಎದುರು ಸಾಂಕೇತಿಕ ಧರಣಿ ಹೂಡಿದ್ದಾರೆ.

ಈ ಸಂಧರ್ಭದಲ್ಲಿ ಬಸವರಾಜ ಕಟ್ಟಿಮನಿ, ಮಾಂತೇಶ ಕಲಾಲ, ಶಂಕರ ತೋಟದ, ಶರಣಪ್ಪ ಹಕ್ಕರಕಿ, ಗೀತಾ ಗೊಲ್ಲರ, ಗೀತಾ ಜನ್ನರ, ವಿಜಯಲಕ್ಷ್ಮಿ ಕಲಾಲ, ಎನ್.ಬಿ. ಬೆಂಡಿಗೇರಿ, ಈರಣ್ಣ ಚವಡಿ, ಮಲ್ಲಿಕಾರ್ಜುನ ಸಂಗನಗೌಡ್ರ, ಸಿದ್ದು ಪೂಜಾರ, ಶಂಶುದ್ದೀನ್ ಕಿರೇಸೂರ, ರಾಜು ಜಾಲಿಹಾಳ ಅನೇಕರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

25/03/2022 08:47 pm

Cinque Terre

27.96 K

Cinque Terre

1

ಸಂಬಂಧಿತ ಸುದ್ದಿ