ಧಾರವಾಡ: ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೇ ಈಗ ಆಗಿದೆ ಅಂತ ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ಪುನರ್ ವಸತಿ ಮಾಡುವುದು ಸರ್ಕಾರದ ಕರ್ತವ್ಯ, ಕಾಶ್ಮೀರ ಅಥವಾ ದೇಶದ ಯಾವ ಭಾಗದಲ್ಲಿ ಬಯಸಿದಲ್ಲಿ ಕೊಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತ ಬಂದಿದೆ. ಕಾಶ್ಮೀರ ಫೈಲ್ಸ್‌ಗೆ ವಿರೋಧ ಮಾಡೋದಕ್ಕೆ ಇದೇ ಕಾರಣ, 70 ವರ್ಷದಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ತುಷ್ಟೀಕರಣ ರಾಜಕಾರಣ ಆರ್ಟಿಕಲ್ 370, ಕಾಶ್ಮೀರಕ್ಕೆ 35ಎ ಕೊಟ್ಟಿದ್ದರು. ಇದನ್ನೆಲ್ಲ ಕೊಟ್ಟು ಭಾರತದ ಕಾನೂನು ನಡೆಯದಂತೆ ಮಾಡಿದ್ದರು. ಅದನ್ನೆಲ್ಲ ಮುಚ್ಚಿ ಹಾಕಲು ಸಿನಿಮಾ ವಿರೋಧಿಸುತ್ತಿದ್ದಾರೆ. ಅಲ್ಲದೆ ಈಗ ಸಮಾಜ ಜಾಗೃತ ಆಗಿದೆ. ಆದರು ಕೂಡ ತುಷ್ಟೀಕರಣ ರಾಜಕಾರಣ ಬಿಡುತ್ತಿಲ್ಲ. ಪಠ್ಯದಲ್ಲಿ ಭಗವದ್ಗೀತೆ ತರಲೂ ಕಾಂಗ್ರೆಸ್ ವಿರೋಧ ಮಾಡುತ್ತಿದ್ದಾರೆ ಎಂದು ಕೈ ಪಕ್ಷದ ವಿರುದ್ಧ ಗುಡಗಿದರು.
ಕಾಂಗ್ರೆಸ್ ನಾಯಕರ ವಿರೋಧದಿಂದಲೇ ಸಿನಿಮಾ ಜನಪ್ರಿಯವಾಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಹಿಂದಿ ಬರುವುದಿಲ್ಲ ನೋಡುವುದಿಲ್ಲ ಅಂತಾರೆ. ಬೇರೆ ಬೇರೆ ಸಿನಿಮಾ ನೋಡೋಕೆ ಹೋಗ್ತಾರೆ ಈ ಸಿನಿಮಾಗೆ ಇಂಗ್ಲಿಷ್ ಸಬ್ ಟೈಟಲ್ ಇದೆ. ಇಂಗ್ಲಿಷ್ ಬರೋಲ್ವಾ ನಿಮಗೆ ಪಕ್ಕದಲ್ಲಿ ಓರ್ವ ಅನುವಾದಕರನ್ನು ಕುಳ್ಳಿರಿಸಿಕೊಂಡು ನೋಡಿ. ಇಷ್ಟು ಚರ್ಚೆ ಆದಾಗಲೂ ನೋಡುವುದಿಲ್ವಾ. ಹಿಂದುಗಳು, ಪಂಡಿತರ ಸತ್ಯಾನಾಶ ಆದರೂ ಇವರಿಗೆ ಚಿಂತೆ ಇಲ್ಲ. ಅವರನ್ನು ಕೊಯ್ದು ಎರಡು ಭಾಗ ಮಾಡಿದರೂ ಅದನ್ನು ಮರಿಯಬೇಕು. ಆದರೆ ನಮಗೆ ಮತ ಸಿಗಬೇಕು ಇದೇ ಕಾಂಗ್ರೆಸ್ ನೀತಿಯಾಗಿದೆ. ನೀವು ಮೊದಲು ಸಿನಿಮಾ ನೋಡಿ ಬಳಿಕ ತಪ್ಪಾಗಿದೆ ಅಂತ ಹೇಳಿ. ಆಗ ಜನ ಕ್ಷಮಿಸುತ್ತಾರೆ ಎಂದು ಕೇಂದ್ರ ಸಚಿವ ಜೋಶಿ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2022 02:55 pm