ಧಾರವಾಡ: ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕುತಂತ್ರದಿಂದ ದಕ್ಷ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ದಲಿತ ಮುಖಂಡರು ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀಧರ ಸತಾರೆ ಓರ್ವ ಉತ್ತಮ ಅಧಿಕಾರಿ. ಅವರನ್ನ ಉದ್ದೇಶಪೂರ್ವಕವಾಗಿ ಅಮಾನತು ಮಾಡಲಾಗಿದೆ. ಈ ಆದೇಶವನ್ನ ಹಿಂದೆ ಪಡೆಯದೇ ಹೋದರೆ ಹೋರಾಟವನ್ನ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನಾಳೆ ಜಿಲ್ಲಾಧಿಕಾರಿಗೂ ಮನವಿ ಕೊಟ್ಟು, 7 ದಿನಗಳ ಕಾಲಾವಕಾಶ ನೀಡುತ್ತೇವೆ. ಅಮಾನತು ಹಿಂದೆ ಪಡೆಯದೇ ಹೋದರೆ ಹೋರಾಟವನ್ನ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
Kshetra Samachara
13/03/2022 04:13 pm