ಧಾರವಾಡ: ಧಾರವಾಡ ಉಪನೊಂದಣಾಧೀಕಾರಿ ಕಚೇರಿಗೆ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ದಿಢೀರ್ ಭೇಟಿ ನೀಡಿದರು.
ನಗರದ ಮಿನಿ ವಿಧಾನಸೌಧನದಲ್ಲಿರುವ ಈ ಕಚೇರಿಗೆ ಭೇಟಿ ನೀಡಿ ಜಮೀನು ನೊಂದಣಿಗೆ ಬಂದ ಜನರ ಸಮಸ್ಯೆಗಳನ್ನ ಆಲಿಸಿದರು. ಅಲ್ಲದೇ ಸರ್ವರ್ ಸಮಸ್ಯೆ ಇರುವ ಕಾರಣ, ಜನರು ಬೆಳಿಗ್ಗೆಯಿಂದ ಸಂಜೆವರೆಗೆ ದಾಖಲೆ ನೊಂದಣಿಗೆ ಬಂದು ನಿಲ್ಲುವಂತೆ ಆಗಿದ್ದಕ್ಕೆ, ಅಧಿಕಾರಿಗಳಿಗೆ ಕೂಡಾ ಈ ಬಗ್ಗೆ ಸೂಚನೆ ನೀಡಿದರು.
ಇನ್ನು ಈ ಕಚೇರಿಯನ್ನ ಎರಡು ವಿಭಾಗವಾಗಿ ಮಾಡಬೇಕು ಎಂದು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರಿಂದ ಕಚೇರಿ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುವದಾಗಿ ಶಾಸಕ ಬೆಲ್ಲದ ಹೇಳಿದರು. ಅಲ್ಲದೇ ಕಚೇರಿ ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ಕೂಡಾ ಅಧಿಕಾರಿಗಳಿಗೆ ಮಾತನಾಡುವದಾಗಿ ಶಾಸಕರು ಹೇಳಿದರು.
Kshetra Samachara
05/03/2022 10:09 pm