ಹುಬ್ಬಳ್ಳಿ: ಎಪಿಎಂಸಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಆಗ್ರಹಿಸಿ ಶಂಕ್ರಣ್ಣ ಬೀಜವಾಡ ನಡೆಸುತ್ತಿರುವ ಧರಣಿಯ ಸ್ಥಳಕ್ಕೆ ತಹಶೀಲ್ದಾರ್ ಶಶಿಧರ ಮಾಡ್ಯಾಳ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು.
ನಿವೇಶನ ಹಂಚಿಕೆ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪಿಸಿ ಶಂಕ್ರಣ್ಣ ಬೀಜವಾಡ ಕಳೆದ ಮೂರ್ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ಶಂಕ್ರಣ್ಣ ಬೀಜವಾಡ ಅವರೊಂದಿಗೆ ಸಮಾಲೋಚನೆ ನಡೆಸಿ ಧರಣಿ ಹಿಂಪಡೆಯುವಂತೆ ಮನವೊಲಿಸಲು ಮುಂದಾಗಿದ್ದಾರೆ.
ಆದರೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಧರಣಿ ಹಿಂಪಡೆಯುವುದಿಲ್ಲ ಎಂದು ಶಂಕ್ರಣ್ಣ ಬೀಜವಾಡ ಪಟ್ಟು ಹಿಡಿದಿದ್ದು, ಸೂಕ್ತ ತನಿಖೆ ಮಾಡುವಂತೆ ತಹಶೀಲ್ದಾರ್ ಶಶಿಧರ ಮಾಡ್ಯಾಳ ಭರವಸೆ ನೀಡಿದ್ದಾರೆ.
Kshetra Samachara
05/03/2022 02:50 pm