ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರದ್ದು ದೊಡ್ಡ ಪ್ರಮಾಣದ ಕೊಡುಗೆ ಇದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಗಡ್ಕರಿ ಅವರು ಕೇಂದ್ರ ಸಚಿವರಾದಾಗ ನಾವು ಬಹಳಷ್ಟು ಆಸೆ ಇಟ್ಟುಕೊಂಡಿದ್ದೆವು. ಅವರ ಹಲವಾರು ರಸ್ತೆ ಕಾಮಗಾರಿ, ದಾಖಲೆ ಜೊತೆಗೆ ಮಾದರಿಯಾಗಿತ್ತು. ಅದರಂತೆ ರಸ್ತೆಯಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎನ್ನುವ ನಿರೀಕ್ಷೆಯನ್ನು ಅವರು ಇಂದು ಈಡೇರಿಸುತ್ತಿದ್ದಾರೆ ಎಂದರು.
ಯಾವುದು ಅಸಾಧ್ಯ ಎನ್ನುತ್ತಿದ್ದೇವೋ ಇದೀಗ ಎಲ್ಲವೂ ಸಾಧ್ಯವಾಗುತ್ತಿದೆ. ಪ್ರಧಾನಿ ಮೋದಿ ಅವರ ಚಿಂತನೆಯನ್ನು ಕಾರ್ಯಗತ ಮಾಡುತ್ತಿರುವುದು ನಿತಿನ್ ಗಡ್ಕರಿ. ನಿಮ್ಮ ಕೆಲಸ ಮತ್ತು ನಿಮ್ಮ ಕಾಳಜಿಯಿಂದ ಇಷ್ಟೆಲ್ಲ ಕಾರ್ಯ ನಡೆಯುತ್ತಿದೆ ಎಂದು ಅಭಿನಂದನೆ ಸಲ್ಲಿಸಿದರು.
ರಸ್ತೆಯಲ್ಲಿ ನಡೆಯುತ್ತಿರುವ ಹಲವಾರು ಸಾವು ನೋವುಗಳಿಗೆ ಗಡ್ಕರಿ ಮುಕ್ತಿ ಕೊಟ್ಟಿದ್ದಾರೆ. ಹಲವಾರು ಕಾಮಗಾರಿಗೆ ನೀವು ಅಡಿಗಲ್ಲು ಹಾಕಿದ್ದೀರಿ ಅದಕ್ಕಾಗಿ ನಿಮಗೆ ನನ್ನ ಧನ್ಯವಾದ. ರಾಜ್ಯದ ವಿವಿಧ ಜಿಲ್ಲೆಗಳ ಡಿಪಿಆರ್ ಗೆ ನಿತಿನ್ ಗಡ್ಕರಿ ಅವರಿಗೆ ಸಿಎಂ ಬಸವರಾಜ ಮನವಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/02/2022 06:49 pm