ಧಾರವಾಡ: ಧಾರವಾಡದ ಲೋಕೋಪಯೋಗಿ ಇಲಾಖೆ ಡಿವಿಜನ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಚೌಡಣ್ಣವರ ಹಾಗೂ ನವಲಗುಂದ ಎಇಇ ಸಿದ್ದಾಪುರ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇದೀಗ ಪಿಡಬ್ಲ್ಯೂಡಿ ಕಚೇರಿ ಎದುರೇ ಧರಣಿ ಕುಳಿತಿದ್ದಾರೆ. ಈ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದು, ಅವರ ಮೇಲೆ ತನಿಖಾ ತಂಡ ರಚಿಸುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಕರವೇ ಸ್ಪಷ್ಟಪಡಿಸಿದೆ.
ಸರ್ಕಾರದ ಅನುದಾನ ದುರ್ಬಳಕೆ, ಗುತ್ತಿಗೆದಾರರಿಂದ ಲಕ್ಷಗಟ್ಟಲೇ ಕಮಿಷನ್ ಪಡೆಯುತ್ತಿರುವ ಈ ಅಧಿಕಾರಿಗಳು, ಕೋಟಿ ಕೋಟಿಗಟ್ಟಲೇ ಭ್ರಷ್ಟಾಚಾರವೆಸಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ರಸ್ತೆಗಳ ನಿರ್ಮಾಣ, ದುರಸ್ತಿ ಕೆಲಸಗಳಲ್ಲಿ ಅಧಿಕಾರಿಗಳು ಸರ್ಕಾರದ ಹಣವನ್ನು ತಿಂದು ತೇಗಿದ್ದಾರೆ. ಸರ್ಕಾರ ಕೂಡಲೇ ಇವರನ್ನು ಅಮಾನತ್ತು ಮಾಡಿ, ಇವರ ಮೇಲೆ ವಿಚಾರಣಾ ತಂಡವನ್ನು ನೇಮಿಸಬೇಕು ಎಂದು ಕರವೇ ಆಗ್ರಹಿಸಿದೆ.
Kshetra Samachara
24/02/2022 03:09 pm