ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಿವಮೊಗ್ಗದ ಹರ್ಷನ ಕಗ್ಗೊಲೆ ಖಂಡಿಸಿ ಪ್ರತಿಭಟನೆ

ಕಲಘಟಗಿ: ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯನ್ನು ಖಂಡಿಸಿ ಕಲಘಟಗಿಯಲ್ಲಿ ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ಕೃಷಿ ಮಾರುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸಾವಿರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ತಪ್ಪಿಗಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವರಾಜ ಹೊನ್ನಳ್ಳಿ ಮಾತನಾಡಿ, ಹಿಂದೂ ಹೆಸರು ಹೇಳಿ ನೀವು (ಬಿಜೆಪಿ) ಅಧಿಕಾರಕ್ಕೆ ಬಂದಿದ್ದೀರಿ. ಆದರೆ ನಿಮ್ಮ ಸರ್ಕಾರದ ಅವಧಿಯಲ್ಲೇ ಹಿಂದೂ ಸಂಘಟನೆಗಳ ಅನೇಕ ಕಾರ್ಯಕರ್ತರ ಕೊಲೆಗಳು ನಡೆದಿವೆ. ಆದರೂ ನೀವು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದು ಖಂಡನೀಯ ಎಂದರು.

ಬಜರಂಗದಳದ ಕಾರ್ಯಕರ್ತ ಪರಶುರಾಮ ಹೂಲಿಹೊಂಡ ಮಾತನಾಡಿದರು. ಪ್ರತಿಭಟನೆಯಿಂದಾಗಿ ಕೆಲ ಗಂಟೆಗಳ ಕಾಲ ರಸ್ತೆ ತಡೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಆಂಜನೇಯ ಸರ್ಕಲ್ ಬಳಿ ಪ್ರತಿಭಟನಾಕಾರರು ವರ್ತಳಾಕಾರದಲ್ಲಿ ಸರಪಳಿ ರಚಿಸಿ 'ಹರ್ಷ ಅಮರ ಹೈ' ಘೋಷಣೆ ಕೂಗಿ ಎಂದು ಗೌರವ ಸಲ್ಲಿಸಿದರು.

ಪೋಲಿಸರು ಬಿಗಿ ಬಂದೋಬಸ್ತ್‌ ಮಾಡಿದ್ದರಿಂದ ಯಾವುದೇ ಅವಗಡ ಸಂಭವಿಸಿಲ್ಲ. ಪ್ರತಿಭಟನೆಯಲ್ಲಿ ಕಿರಣ್ ದೈವಜ್, ವಿಕಾಸ್ ಹಿರೇಮಠ, ವಿನಾಯಕ ಗೌಳಿ, ವಿನಾಯಕ್ ಗಾಯಕ್ವಾಡ, ಬಸವರಾಜ್ ಮಾದರ್, ಬಸು ಕಡ್ಲಾಸ್ಕರ, ಸಚಿನ್ ಚಿಂತಾಮಣಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/02/2022 03:12 pm

Cinque Terre

26.36 K

Cinque Terre

2

ಸಂಬಂಧಿತ ಸುದ್ದಿ