ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಾ.ಚೆನ್ನವೀರ ಕಣವಿ ಮನೆಗೆ ಶೆಟ್ಟರ್, ಸಚಿವ ಮುನೇನಕೊಪ್ಪ ಭೇಟಿ

ಧಾರವಾಡ: ಮೊನ್ನೆಯಷ್ಟೇ ಅನಾರೋಗ್ಯದಿಂದ ನಿಧನರಾದ ನಾಡಿನ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ನಿವಾಸಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜೊತೆಗೆ ಧೈರ್ಯ ಕೂಡ ಹೇಳಿದರು.

ಮಧ್ಯಾಹ್ನದ ಹೊತ್ತಿಗೆ ಕಣವಿ ಅವರ ನಿವಾಸಕ್ಕೆ ಆಗಮಿಸಿದ ಇಬ್ಬರೂ ನಾಯಕರು, ಮೊದಲು ಡಾ.ಚೆನ್ನವೀರ ಕಣವಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಧಿವೇಶನ ಇರುವ ಕಾರಣ ಅವರು ನಿಧನರಾದಾಗ ಬರಲಿಕ್ಕೆ ಆಗಲಿಲ್ಲ. ಸ್ಪೆಷಲ್ ಫ್ಲೈಟ್​ ಮೂಲಕ ಬರಬೇಕು ಎಂದುಕೊಂಡರೂ ಆಗಲಿಲ್ಲ ಕ್ಷಮಿಸಿ ಎಂದು ಕಣವಿ ಕುಟುಂಬಸ್ಥರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮಗಳಿಗೆ ಪೂರ್ವ ತಯಾರಿಯಾಗಿಯೇ ಕಣವಿ ಅಜ್ಜನವರು ಬರುತ್ತಿದ್ದರು ಎಂದು ಕಣವಿ ಅವರನ್ನು ಸ್ಮರಿಸಿಕೊಂಡರು.

Edited By : Shivu K
Kshetra Samachara

Kshetra Samachara

19/02/2022 05:07 pm

Cinque Terre

25.33 K

Cinque Terre

1

ಸಂಬಂಧಿತ ಸುದ್ದಿ