ಧಾರವಾಡ: ಅಟ್ರಾಸಿಟಿ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಈ ಪ್ರತಿಭಟನೆಯನ್ನು ವಿರೋಧಿಸಿ ದಲಿತ ಮುಖಂಡರು ಘೋಷಣೆ ಕೂಗಿದ ಪ್ರಸಂಗ ಧಾರವಾಡದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.
ಅಟ್ರಾಸಿಟಿ ಕಾಯ್ದೆ ಇತ್ತೀಚಿನ ದಿನಗಳಲ್ಲಿ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಧಾರವಾಡದ ಕಡಪಾ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ದಲಿತ ಮುಖಂಡರು ಅಂಬೇಡ್ಕರ್ ವೃತ್ತದ ಬಳಿ ಬಂದು ಈ ಪ್ರತಿಭಟನೆಯ ವಿರುದ್ಧವೇ ಧಿಕ್ಕಾರ ಕೂಗಲಾರಂಭಿಸಿದರು. ದಲಿತ ಮುಖಂಡರನ್ನು ತಡೆದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು
Kshetra Samachara
18/02/2022 03:07 pm