ಹುಬ್ಬಳ್ಳಿ: ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದೂಗಳೇ ನನ್ನನ್ನು ಗುರುತಿಸುತ್ತಾರೆ. ಹಾಗೂ ಪ್ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವವರು, ರಾಜಕಾರಣಕ್ಕೆ ಬಂದ ಮೇಲೆ ಯಾವ ಕಾರಣಕ್ಕೂ ಜಾತಿಕಾರಣ ಮಾಡಬಾರದು. ನಾವು ಜನಪ್ರತಿನಿಧಿ ಎಂದ ಮೇಲೆ ಹಿಂದೂ-ಮುಸ್ಲಿಂ ಸೇರಿ ಇತರ ಧರ್ಮೀಯರು ಒಂದೇ ಎಂಬಂತೆ ಕಾಣಬೇಕು ಎನ್ನುವ ಮೂಕಜ ಶಾಲಾ-ಕಾಲೇಜುಗಳಲ್ಲಿ ಜಾತೀಯತೆ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಎಚ್.ಡಿ ದೇವೆಗೌಡ, ಕುಮಾರಸ್ವಾಮಿ ಎಲ್ಲರೂ ಬಂದಿದ್ದರು. ಶತಾಯ-ಗತಾಯ ನನ್ನನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದರು. ಈ ಕುರಿತಂತೆ ನಮ್ಮ ನಾಯಕರು ಸಹ ಈ ಬಾರಿ ಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು ಅಂತ ಹೇಳಿದರು. ಆದರೆ ಅಂತಿಮವಾಗಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಜಮೀರ್ ಅಹ್ಮದ್ ಇದೇ ವೇಳೆ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/02/2022 10:18 am