ಹುಬ್ಬಳ್ಳಿ : ಹಿಜಾಬ್ ವಿವಾದದಿಂದ ರಾಜ್ಯದಲ್ಲಿ ಬಂದ್ ಆಗಿದ್ದ ಶಾಲೆಗಳು ನಾಳೆಯಿಂದ ಪುನರಾರಂಭವಾಗಲಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ..
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭಿಸುತ್ತೇವೆ, ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತವಾಗಿ ಎಲ್ಲಾ ತರಗತಿಗಳು ನಡೆಯುತ್ತವೆ ಎಂದು ಹೇಳಿದರು.
ಇನ್ನು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೆವೆ. ಶಾಲಾ ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆಧ್ಯತೆವಾಗಿದೆ ಎಂದರು.
ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನ ಹಾಕ್ತಾರೊ ಅವೆಲ್ಲವನ್ನೂ ನಮ್ಮ ಅಧಿಕಾರಿಗಳು ಗಮನಿಸುತ್ತಾರೆ.
ಇದೇ ಸಮಯದಲ್ಲಿ ರಾಜ್ಯ ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿ ಎರಡು ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕತೆ ಬಹಳ ನಷ್ಟ ಆಗಿದೆ.
ಈ ಬಜೆಟ್ ನಲ್ಲಿ ಅದಕ್ಕೆ ಬೂಸ್ಟ್ ಕೊಡುವ ಪ್ರಯತ್ನ ಮಾಡುತ್ತೇವೆ. ಸಮಗ್ರ ಕರ್ನಾಟಕದ ಅಭಿವೃದ್ದಿ ಚಿಂತನೆ ಇದೆ. ಆರ್ಥಿಕ ಅಭಿವೃದ್ದಿ, ಜನಕಲ್ಯಾಣ ಹಾಗೂ ಶಿಸ್ತು ಎಲ್ಲವನ್ನೂ ದೃಷ್ಠಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಲಿದೆ ಎಂದರು.
Kshetra Samachara
13/02/2022 11:14 am