ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 40 ಲಕ್ಷ ರೂ. ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ಶಾಸಕಿ ಮೆಚ್ಚುಗೆ

ಕುಂದಗೋಳ: ತಾಲೂಕಿನ ಕೊಡ್ಲಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 48 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಅತ್ಯಾಧುನಿಕ ಕಲಿಕಾ ಚಟುವಟಿಕೆ ಹೊಂದಿರುವ ಕೊಠಡಿಯನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಉದ್ಘಾಟಿಸಿದರು.

ಲೋಕೋಪಯೋಗಿ ಇಲಾಖೆ ಹಾಗೂ ನಬಾರ್ಡ್ ಯೋಜನೆ ಅಡಿಯಲ್ಲಿ ಈ ಕೊಠಡಿ ನಿರ್ಮಾಣವಾಗಿದೆ. ಶಾಲಾ ಕೊಠಡಿಯನ್ನು ನೋಡಿ ಸಂತಸಪಟ್ಟ ಶಾಸಕಿ ಕುಸುಮಾವತಿ ಶಿವಳ್ಳಿ, 'ಶೈಕ್ಷಣಿಕ ಪ್ರಗತಿ ನಿಟ್ಟಿನಲ್ಲಿ ಈ ತರಹ ಶಾಲಾ ಕೊಠಡಿ ಎಲ್ಲಾ ಗ್ರಾಮಕ್ಕೂ ಅವಶ್ಯ' ಎಂದರು.

ಬಳಿಕ ಕಂಪ್ಯೂಟರ್ ಪರದೆ ಮೂಲಕ ಶಾಲಾ ಶಿಕ್ಷಕರು ಶಾಲೆಯನ್ನು ಪ್ರಗತಿಯತ್ತ ಕೊಂಡಯ್ಯದ ದಾಖಲೆ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶಾಲಾಭಿವೃದ್ಧಿ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

11/02/2022 01:56 pm

Cinque Terre

19.43 K

Cinque Terre

0

ಸಂಬಂಧಿತ ಸುದ್ದಿ