ಹುಬ್ಬಳ್ಳಿ: ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಮತ್ತೆ ಬಂದೆ ಬರ್ತಾರೆ. ನಾನೊಬ್ಬನೇ ಅದನ್ನ ಹೇಳಿಲ್ಲ. ನಮ್ಮ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಅದನ್ನೇ ಹೇಳ್ತಿರೋದು. ಪಕ್ಷಾಂತರ ಪರ್ವ ಪ್ರಾರಂಭ ಆಗಿಲ್ಲ. ಪಕ್ಷಾಂತರ ಪರ್ವ ಆರಂಭ ಆದ್ರೆ ಹೋದವರೆಲ್ಲ ಮತ್ತೆ ಬರ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಗಲಾಟೆ 2-3 ದಿನ ಅಷ್ಟೇ ಆಗುತ್ತದೆ. ಅದೆಲ್ಲ ಆಮೇಲೆ ತಣ್ಣಗಾಗುತ್ತದೆ. ಶಿಕ್ಷಣದಲ್ಲಿ ಹಾಗೆ ಆಗಬಾರದು, ಅವರದೆಲ್ಲ ಕಲಿಯುವ ವಯಸ್ಸು, ಮೊದಲು ಸರಿಯಾಗಿ ಕಲಿಯಲಿ. ಸರ್ಕಾರ ಮತ್ತು ಆಡಳಿತ ಮಂಡಳಿ ಇದರ ಬಗ್ಗೆ ನಿಗಾವಹಿಸಿ ನಿಯಂತ್ರಣ ಮಾಡಬೇಕು. ತಕ್ಷಣ ಸರ್ಕಾರ ಮತ್ತು ಆಡಳಿತ ಮಂಡಳಿ ಮಧ್ಯೆ ಪ್ರವೇಶಿಸಿ ನಿಯಂತ್ರಣ ಮಾಡಬೇಕು. ಇದು ಹೀಗೆ ಮುಂದುವರೆಯದಂತೆ ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ನ ಹಿರಿಯರು ಸಿಎಂ ಇಬ್ರಾಹಿಂ ಕಿಡಿ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಅವರು ನಮ್ಮ ಪಕ್ಷದಿಂದ ಹೊರಗೆ ಹೋಗಿಲ್ಲ. ನಮ್ಮ ಪಕ್ಷದಲ್ಲೇ ಇರ್ತಾರೆ ಅನ್ನೋ ಭರವಸೆ ಇದೆ. ಹಿರಿಯರ ಸಮ್ಮುಖದಲ್ಲಿ ಈ ವಿಚಾರ ತಿಳಿಗೊಳ್ಳಲಿದೆ. ಕಾಂಗ್ರೆಸ್ ನಲ್ಲಿ ಹಿರಿಯರನ್ನ ಕಡೆಗಣನೆ ಬಗ್ಗೆ ಹೈಕಮಾಂಡ್ ಗಮನಿಸುತ್ತದೆ. ಅದರ ಬಗ್ಗೆ ರಾಷ್ಟ್ರೀಯ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ ಸತೀಶ್ ಜಾರಕಿಹೊಳಿ.
ಮಹದಾಯಿ ಪಾದಯಾತ್ರೆ ವಿಚಾರ ಈ ಬಗ್ಗೆ ಚಿಂತನೆ ನಡೆಯುತ್ತಿದೆ. ಕೋವಿಡ್ ಕಡಿಮೆಯಾದ ಮೇಲೆ ತೀರ್ಮಾನ ಮಾಡುತ್ತೇವೆ.
ಗೋವಾ ಚುನಾವಣೆ ಹಿನ್ನೆಲೆಯಲ್ಲಿ, ಕಳೆದ ಬಾರಿ 17 ಸ್ಥಾನಗಳನ್ನ ಗೆದ್ದಿದ್ದೆವು. ಆದ್ರೆ ಆಂತರಿಕ ಕಾರಣದಿಂದ ಅಧಿಕಾರ ಕೈತಪ್ಪಿತ್ತು. ಈ ಬಾರಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬರ್ತೀವಿ ಎಂದು ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/02/2022 09:34 pm