ಧಾರವಾಡ: ಶಾಲೆ, ಕಾಲೇಜುಗಳಲ್ಲಿ ಎಲ್ಲರೂ ಒಂದೇ ಎಂಬ ಕಾರಣಕ್ಕೆ ಸಮವಸ್ತ್ರಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಕಲಿಸುವ ಗುರುಗಳು ಸಹ ಒಂದೇ ಆಗಿರುತ್ತಾರೆ. ಹೀಗಾಗಿ ಹಿಜಾಬ್ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಪೀಠದ ಸಿದ್ಧತೆ ನಮ್ಮ ಸಾನಿಧ್ಯದಲ್ಲಿ ನಡೆಯುತ್ತಿದೆ. ನಮ್ಮ ದೃಷ್ಠಿಯಿಂದ ಅದು ನಮ್ಮ ಪೀಠ. ನಮ್ಮಲ್ಲಿ ಒಂದನೇ ಪೀಠ, ಎರಡನೇ ಪೀಠ ಎಂದಿಲ್ಲ. ಲಕ್ಷಾಂತರ ಭಕ್ತರ ಹಿತದೃಷ್ಠಿಯಿಂದ ಇದು ನಡೆಯುತ್ತಿದೆ. ಪಂಚಮಸಾಲಿ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಸಬೇಕಿದೆ. ಈಗ ನಮ್ಮ ಜಮಖಂಡಿ ಭಾಗದಲ್ಲಿ ಹೆಸರಾಂತ ಸ್ವಾಮೀಜಿ ಪೀಠವನ್ನು ಅಲಂಕರಿಸಲಿದ್ದಾರೆ ಎಂದರು.
ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರು ಮೂರನೇ ಪೀಠವನ್ನು ಅಲಂಕರಿಸಲಿದ್ದಾರೆ. ಎಲ್ಲ ಭಾಗವಾರು ಪೀಠಗಳು ಸ್ಥಾಪನೆಯಾಗಬೇಕು. ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಭಯ ನಮಗಿಲ್ಲ. ಇದು ಪ್ರಜಾಪ್ರಭುತ್ವ, ವಸಂತ ರೂಪ ಬಂದಾಗ ಕಾಗೆ ಯಾವುದು ಕೋಗಿಲೆ ಯಾವುದು ಎಂಬುದು ಗೊತ್ತಾಗುತ್ತದೆ. ವಸಂತ ಋತುವಿನ ತನಕ ಕಾಯಿರಿ ಎಂದು ಸ್ವಾಮೀಜಿ ಮಾರ್ಮಿವಾಗಿ ನುಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/02/2022 09:29 pm