ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಬೇಡ್ಕರ್ ಅವರಿಗೆ ಅಪಮಾನ; ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ

ಹುಬ್ಬಳ್ಳಿ: ಗಣರಾಜ್ಯೋತ್ಸವ ದಿನದಂದು ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಎಂಬುವವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ನಡೆಸುವುದಾಗಿ ಹೇಳಿದ್ದು, ಅಪಮಾನಕರ ಹಾಗೂ ಖಂಡನೀಯವಾಗಿದೆ ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಘಟನೆಯಿಂದಾಗಿ ಜನಸಾಮಾನ್ಯರಿಗಿರುವ ಗೌರವಕ್ಕೆ ಚ್ಯುತಿ ತರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು. ರಾಜ್ಯ ಸರ್ಕಾರ ಹಾಗೂ ಉಚ್ಛ ನ್ಯಾಯಾಲಯ ಈ ಘಟನೆಗೆ ಸಂಬಂಧಿಸಿದಂತೆ ಇಂತಹ ಪ್ರಮಾದವು ಮುಂದೆಲ್ಲೂ ಹಾಗೂ ಮತ್ತೇಲ್ಲೂ ಆಗದಂತೆ ಕ್ರಮವಹಿಸಬೇಕು.

ಈ ಘಟನೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಿಂದ ದೂರು ನೀಡಲಾಗಿದ್ದು, ರಾಜ್ಯಪಾಲರಿಗೂ ಮನವಿ ಮಾಡಲಾಗಿದೆ. ಫೆ ೧ ರ ಒಳಗಾಗಿ ಶಿಸ್ತು ಕ್ರಮ ಮತ್ತು ಉತ್ತರ ದೊರಕುವ ಭರವಸೆಯಿದ್ದು, ಸರ್ಕಾರವೂ ಸಹ ಈ ಕುರಿತು ಗಂಭೀರವಾಗಿ ಪರಿಗಣಿಸಿ ಮುಂದಾಗುವ ಸಮಸ್ಯೆ ಬಗೆಹರಿಸಬಹುದಾಗಿದೆ. ಆದ್ದರಿಂದ ನ್ಯಾಯಾಂಗ ಮುಖ್ಯಸ್ಥರ ಕ್ರಮಕ್ಕಾಗಿ ಕಾಯುತ್ತೇವೆ ಎಂದ ಅವರು ವಿಳಂಬ ಧೋರಣೆಯನ್ನು ಜಾತಿವಾದಿ, ಸಂವಿಧಾನ ವಿರೋಧಿ ನಡೆ ಎಂದು ಭಾವಿಸಿ ಬುಧವಾರವೇ ಬೃಹತ್ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.

Edited By : Shivu K
Kshetra Samachara

Kshetra Samachara

28/01/2022 08:38 pm

Cinque Terre

23.33 K

Cinque Terre

0

ಸಂಬಂಧಿತ ಸುದ್ದಿ