ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಒತ್ತಾಯ

ನವಲಗುಂದ : ಜನವರಿ 26ರಂದು ರಾಯಚೂರಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನಗೌಡ ಆಗಮಿಸಿದ್ದರು. ಈ ವೇಳೆ ಅಂಬೇಡ್ಕರ್ ಭಾವಚಿತ್ರ ಇದ್ದರೆ ಧ್ವಜಾರೋಹಣ ಮಾಡುವದಿಲ್ಲ ಎಂದು ಮಲ್ಲಿಕಾರ್ಜುನಗೌಡ ಉದ್ದಟತನ ಮೆರೆದು, ಅವಮಾನ ಮಾಡಿದ್ದಾರೆ. ಈ ಕೂಡಲೇ ಅವರನ್ನು ಸೇವೆಯಿಂದ ವಜಾಮಾಡಿ, ರಾಯಚೂರು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ವತಿಯಿಂದ ನವಲಗುಂದ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ರಮೇಶ್ ಮಲ್ಲದಾಸರ, ಸಂಘಟನಾ ಸಂಚಾಲಕರು ರವಿ ಹುನಶಿಮರದ, ಷಣ್ಮುಖ ಪೂಜಾರ್, ತೇಜರಾಜ್ ಮಸಾಲಜಿ, ಮಾರುತಿ ತಳವಾರ, ಮುತ್ತು ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

27/01/2022 06:07 pm

Cinque Terre

15.37 K

Cinque Terre

0

ಸಂಬಂಧಿತ ಸುದ್ದಿ