ಹುಬ್ಬಳ್ಳಿ: ಅಯ್ಯೊ ಕರ್ಮವೇ ಇದೆಂತ ವ್ಯವಸ್ಥೆ ಅಂತೀರಿ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾವಿರಾರು ಶಾಲಾ ಮಕ್ಕಳನ್ನು ಬಳಿಸಿಕೊಂಡಿದ್ದಾರೆ.
ಹೌದು. ಒಂದು ಕಡೆ ರಸ್ತೆ ಉದ್ದಕ್ಕೂ ಶಾಲಾ ಮಕ್ಕಳು, ಇನ್ನೊಂದಡೆ ರಸ್ತೆ ಬಂದ್. ಅಷ್ಟಕ್ಕೂ ಇಷ್ಟೆಲ್ಲ ಏತಕೆ ಅಂತೀರಾ ಇಲ್ಲಿದೆ ಕಾರಣ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ರಸ್ತೆ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಎಂತಹ ರಸ್ತೆ ಉದ್ಘಾಟನೆ ಎನ್ನುವ ಅನುಮಾನ ಹುಟ್ಟಿದೆ. ಕೋವಿಡ್ ರೂಲ್ಸ್‌ಗಳನ್ನು ಗಾಳಿಗೆ ತೂರಿ ರಸ್ತೆ ಉದ್ಘಾಟನೆ ಮಾಡುತ್ತಿದ್ದಾರೆ.
ನಗರದ ಕೇಶ್ವಾಪುರ ರಸ್ತೆ ಸಿದ್ಧವಾಗಿದೆ. ಆದರೆ ಇಂದು ಅದರ ಉದ್ಘಾಟನೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಪಾಲಕರು ಮತ್ತು ಸಾರ್ವಜನಿಕರ ಕಣ್ಣಿಗೆ ಗರಿಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಬಿಸಿನಲ್ಲೇ ರಸ್ತೆಯಲ್ಲಿ ನಿಂತ ವಿದ್ಯಾರ್ಥಿಗಳು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಹೇಬರೆ ಇದು ಪ್ರಚಾರಕ್ಕಾಗಿ ಇಷ್ಟೊಂದು ಆಡಂಬರದ ಉದ್ಘಾಟನೆ ಬೇಕಾಗಿತ್ತಾ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
Kshetra Samachara
27/01/2022 01:05 pm