ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂಬರುವ ಚುನಾವಣಾಗೆ ಈ ಮೇಕೆದಾಟು; ಮಾಜಿ ಸಿಂ ಶೆಟ್ಟರ್ ಆರೋಪ

ಹುಬ್ಬಳ್ಳಿ - ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣಿ, ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಮುಖಂಡರ ಮೇಲೆ ಗರಂ ಆದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಹೋರಾಟದ ಮೂಲಕ ಇದನ್ನು ಪರಿಹರಿಸೋಕೆ ಆಗಲ್ಲ. ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ‌. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ರಾಜಕಾರಣ ಆರಂಭಿಸಿದೆ ಎಂದು ಆರೋಪಿಸಿದರು.

ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ. ಪಾದಯಾತ್ರೆ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳ್ಳುವಂತೆ ಕಾಂಗ್ರೆಸ್ ಮಾಡ್ತಿದೆ. ನೀರಾವರಿ ಇರಲಿ ಯಾವುದೇ ಯೋಜನೆ ಇರಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ಬಗ್ಗೆ ಚಕಾರ ಎತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಇದಕ್ಕೊಂದು ಪರಿಹಾರ ಕೊಡುವ ಪ್ರಯತ್ನ ನಡೆದಿದೆ.

ಇಷ್ಟು ವರ್ಷ ಸುಮ್ಮನೆ ಕುಳಿತು ಈಗ ಏಕೆ ಕಾಂಗ್ರೆಸ್ ನವರು ಹೋರಾಟ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮೇಕೆದಾಟು ಯೋಜನೆ ಆರಂಭಿಸಿ ಬಹುದಿತ್ತಲ್ಲವೇ. ಅಧಿವೇಶನದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ನವರು ಗಂಭೀರ ಚರ್ಚೆ ಮಾಡೋ ಪ್ರಯತ್ನ ಮಾಡಲಿಲ್ಲ. ಅಸೆಂಬ್ಲಿಯಲ್ಲಿ ಇದನ್ನು ಚರ್ಚಿಸುವುದಿಲ್ಲ ಚುನಾವಣೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಪಾದಯಾತ್ರೆ ಮಾಡ್ತಿದಾರೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/01/2022 02:45 pm

Cinque Terre

64.65 K

Cinque Terre

7

ಸಂಬಂಧಿತ ಸುದ್ದಿ